ಬೆಂಗಳೂರಿನ ರಸ್ತೆಯಲ್ಲಿ ಕ್ರಿಸ್ ಕ್ರಾಸ್: ಏನಿದು ಈ ಹೊಸ ಟ್ರಾಫಿಕ್ ರೂಲ್ಸ್? ದಂಡ ಎಷ್ಟು?

Public TV
1 Min Read
criss cross traffic bengaluru 2

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಪೊಲೀಸರು ರಸ್ತೆಯಲ್ಲಿ ಹಳದಿ ಬಣ್ಣದ ಚೌಕ(ಕ್ರಿಸ್ ಕ್ರಾಸ್)ವನ್ನು ಪರಿಚಯಿಸಿದ್ದಾರೆ.

ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಪ್ರದೇಶಗಳಲ್ಲಿ ಸುಲಭವಾಗಿ ವಾಹನಗಳು ಚಲಿಸುವಂತಾಗಲು ಪೊಲೀಸರು ರಸ್ತೆಯಲ್ಲಿ ಹಳದಿ ಬಣ್ಣದ ಚೌಕವನ್ನು ಹಾಕಿದ್ದಾರೆ.

ಏನಿದು ಕ್ರಿಸ್ ಕ್ರಾಸ್?
ಸರ್ಕಲ್ ನ ಮಧ್ಯಭಾಗದಿಂದ ಜೀಬ್ರಾ ಕ್ರಾಸ್ ಗುರುತಿನವರೆಗೆ ಬಾಕ್ಸ್ ಮಾದರಿಯಲ್ಲಿ ಹಳದಿ ಬಣ್ಣದ ಪಟ್ಟಿಯನ್ನು ಎಳೆಯಲಾಗಿದ್ದು, ಇದಕ್ಕೆ `ಕ್ರಿಸ್ ಕ್ರಾಸ್’ ಎಂದು ಹೆಸರಿಡಲಾಗಿದೆ. ಈ ಕ್ರಿಸ್ ಕ್ರಾಸ್‍ನಲ್ಲಿ ಯಾವುದೇ ಕಾರಣಕ್ಕೂ ವಾಹನಗಳು ನಿಲ್ಲುವಂತಿಲ್ಲ. ಸವಾರರು/ ಡ್ರೈವರ್‍ಗಳು ಕಡ್ಡಾಯವಾಗಿ ವಾಹನಗಳನ್ನು ಓಡಿಸಿ ಕ್ರಿಸ್ ಕ್ರಾಸ್ ಕ್ಲೀಯರ್ ಮಾಡಲೇಬೇಕು. ಹಸಿರು ಲೈಟ್ ಬಂದ್ ಆಗುವ ಕೊನೆಯ ಕ್ಷಣ ಅಥವಾ ಕೆಂಪು ಲೈಟ್ ಹೊತ್ತಿಕೊಳ್ಳುವ ಕೆಲ ಕ್ಷಣಕ್ಕೂ ಮುನ್ನ ಈ ಗುರುತನ್ನು ಸಂಪೂರ್ಣವಾಗಿ ದಾಟುವ ಸಾಧ್ಯತೆ ಇದ್ದರೆ ಮಾತ್ರ ಮುಂದೆ ಹೋಗಬೇಕು. ಒಂದು ವೇಳೆ ಕೆಂಪು ಲೈಟ್ ಹೊತ್ತಿಕೊಂಡ ವೇಳೆ ವಾಹನಗಳು, ಕ್ರಿಸ್ ಕ್ರಾಸ್ ನಲ್ಲೇ  ನಿಂತಿದ್ದರೆ ಸ್ಥಳದಲ್ಲೇ 100ರೂ. ದಂಡ ಬೀಳುವುದು ಗ್ಯಾರಂಟಿ.

ಈಗಾಗಲೇ 11 ಜಂಕ್ಷನ್‍ಗಳನ್ನು ಗುರುತಿಸಿದ್ದು, 40 ಜಂಕ್ಷನ್‍ಗಳಲ್ಲಿ ಕ್ರಿಸ್‍ಕ್ರಾಸ್ ಪಟ್ಟಿಯನ್ನು ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಸಿಗ್ನಲ್‍ನಲ್ಲಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ಶನಿವಾರ 1800 ಕೇಸ್‍ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

criss cross traffic bengaluru 1

criss cross traffic bengaluru 2 1

criss cross traffic bengaluru 3

criss cross traffic bengaluru 4

Share This Article
Leave a Comment

Leave a Reply

Your email address will not be published. Required fields are marked *