ಬೆಂಗಳೂರು: ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ (Rain) ಸುರಿದಿದ್ದು, ಬೆಂಗಳೂರು ನಗರದಾದ್ಯಂತ ದಾಖಲೆಯ ಮಳೆಯಾಗಿದೆ.
ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: Bengaluru Rain| ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಂದ್ – ಶಿವಾನಂದ ಸರ್ಕಲ್ ಅಂಡರ್ ಪಾಸ್ ಮುಳುಗಡೆ
ರಾಜ್ಯದಲ್ಲಿ ಅತಿಹೆಚ್ಚು ಮಳೆಯಾದ ಪ್ರದೇಶ:
ಮಂಗಳ: ಚಾಮರಾಜನಗರ – 130ಮಿ.ಮೀ
ಕೆಂಗೇರಿ: ಬೆಂಗಳೂರು – 124ಮಿ.ಮೀ
ನಾರಾಯಣಪುರ: ರಾಮನಗರ – 115ಮಿ.ಮೀ
ಸಂತೆಹಳ್ಳಿ: ಕೋಲಾರ – 96ಮಿ.ಮೀ
ಸಿಂಧುವಳ್ಳಿ: ಮೈಸೂರು – 87ಮಿ.ಮೀ
ಹೊಸಹಳ್ಳಿ: ಮಂಡ್ಯ – 77ಮಿ.ಮೀ