ಬೆಂಗಳೂರು: ನಾಳೆ ಅಂದ್ರೆ ಮಾಘಮಾಸದ ಶುಭ ಸೋಮವಾರ ಶಿವರಾತ್ರಿ. ಈ ದಿನವನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ.
ನಗರದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಸಿದ್ಧತೆಗಳು ಆರಂಭವಾಗಿವೆ. ಮಲ್ಲೇಶ್ವರಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷವಾದ ಪೌರಾಣಿಕ ಹಿನ್ನೆಲೆಯ ಸೆಟ್‍ನ್ನು ಅಳವಡಿಸಲಾಗಿದೆ. ಹಾಗೆಯೇ ಅತ್ಯಂತ ಪುರಾತನವಾದ ಕಾಡುಮಲ್ಲೇಶ್ವರ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಗರ್ಭ ಗುಡಿಯನ್ನು ಹೂವು ಹಾಗೂ ಹಣ್ಣುಗಳಿಂದ ಸಿಂಗರಿಸಲಾಗಿದ್ದು, ಜೋಳದ ತೆನೆಯ ಅಲಂಕಾರ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿವೆ.
Advertisement
Advertisement
ಶಿವರಾತ್ರಿಯ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ವ್ಯಾಪಾರ ಕೂಡ ಜೋರಾಗಿ ನಡೆಯುತ್ತಿದೆ. ಕೆ.ಆರ್.ಮಾರ್ಕೆಟ್ ಅಂತು ಗ್ರಾಹಕರಿಂದ ತುಂಬಿ ತುಳುಕ್ತಾ ಇತ್ತು. ಹೂವುಗಳ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದರೂ ಕೂಡ ವ್ಯಾಪಾರ ಮಾತ್ರ ಜೋರಾಗಿದೆ. ಜೊತೆಗೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಕಮಲದ ಹೂವುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಶಿವರಾತ್ರಿಯನ್ನು ಭಕ್ತಿ-ಭಾವದಿಂದ ಆಚರಿಸಲು ಸಿಲಿಕಾನ್ ಸಿಟಿ ಸಕಲ ರೀತಿಯಿಂದಲೂ ಸಜ್ಜುಗೊಂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv