ಅಲ್ಲು, ಮಹೇಶ್ ನಂತರ ಮತ್ತೊಬ್ಬ ಸ್ಟಾರ್ ನಟನೊಂದಿಗೆ ರಶ್ಮಿಕಾ ಸಿನಿಮಾ!

Public TV
1 Min Read
rashmika mandanna 1

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಸ್ಟಾರ್ ನಟನ ಚಿತ್ರವೊಂದಕ್ಕೆ ನಾಯಕನಟಿಯಾಗಿ ಆಯ್ಕೆಯಾಗಿದ್ದಾರೆ.

ತೆಲುಗು ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿ ಸೈ ಅನಿಸಿಕೊಂಡಿರುವ ರಶ್ಮಿಕಾ, ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಪ್ರಿನ್ಸ್ ಮಹೇಶ್ ಬಾಬು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆ ಅಭಿನಯಿಸಿ ಮಿಂಚಿದ್ದಾರೆ. ಈಗ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಜೂನಿಯರ್ ಎನ್‍ಟಿಆರ್ ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

1559559481 mahesh babu rashmika mandanna

ಬೆಳ್ಳಿ ತೆರೆಗೆ ಬಂದು ನಾಲ್ಕೇ ವರ್ಷದಲ್ಲಿ ಸ್ಟಾರ್ ನಟಿಯಾಗಿ ಬೆಳೆದು ನಿಂತ ರಶ್ಮಿಕಾ, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಮತ್ತು ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿ ಚಂದನವನದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಚಂದನವನದ ಯಶಸ್ಸಿನ ನಂತರ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮಂದಣ್ಣ, ಅಲ್ಲಿಯೂ ಕೂಡ ತಮ್ಮ ಕ್ಯೂಟ್ ಆಕ್ಟಿಂಗ್ ಮೂಲಕ ಬಹುಬೇಗ ಗುರುತಿಸಿಕೊಂಡಿದ್ದರು.

Junior NTR

ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಜೊತೆ ಗೀತಗೋವಿಂದಂ, ಮಹೇಶ್ ಬಾಬು ಜೊತೆ ಇತ್ತೀಚೆಗೆ ತೆರೆಕಂಡ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸಿ ತೆಲುಗು ಪ್ರೇಕ್ಷಕನಿಗೆ ಇಂಪ್ರೆಸ್ ಮಾಡಿರುವ ಕೊಡಗಿನ ಕುವರಿ, ಸದ್ಯ ಅಲ್ಲು ಅರ್ಜುನ್ ಜೊತೆ ನಟಿಸಲು ಸಿದ್ಧವಾಗುತ್ತಿದ್ದಾರೆ. ಇದರ ಜೊತೆಗೆ ಜೂನಿಯರ್ ಎನ್‍ಟಿಆರ್ ಸಿನಿಮಾದಲ್ಲಿ ಅಬಿನಯಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

rashmika mandanna and vijay devarakonda 1

ಟಾಲಿವುಡ್‍ನಲ್ಲಿ ಅತಡು, ಅತ್ತಾರಿಂಟಿಕಿ ದಾರೇದಿ, ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೋ ಚಿತ್ರವನ್ನು ನಿರ್ದೇಶನ ಮಾಡಿರುವ ತೆಲುಗಿನ ಸ್ಟಾರ್ ಡೆರಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ಅವರು, ತನ್ನ ಮುಂದಿನ ಚಿತ್ರವನ್ನು ಜೂನಿಯರ್ ಎನ್‍ಟಿಆರ್ ಅವರಿಗೆ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ಎನ್‍ಟಿಆರ್ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *