ಬೆಂಗಳೂರು: ಅಲ್ಲೊಂದು ಗ್ರಾಮ. ಅದಕ್ಕೊಂದು ಅಧಿದೇವತೆಯ ದೇವಸ್ಥಾನ. ಆದರೆ 200 ವರ್ಷದ ಹಿಂದೆ ದೇವಸ್ಥಾನ ಪಾಳು ಬಿದ್ದು ನಾಶವಾಗಿತ್ತು. ಈ ಗ್ರಾಮದಲ್ಲಿ ಕಳೆದ ವರ್ಷ ದೇವರ ಮೂಲ ವಿಗ್ರಹವಿಲ್ಲದೇ ದೇವಸ್ಥಾನವನ್ನು ಕಟ್ಟಿದ್ರು. ಆದರೆ ಮೂಲ ವಿಗ್ರಹ ಹುಡುಕಲೇ ಬೇಕು ಅಂತಾ ಪಟ್ಟು ಹಿಡಿದ ಗ್ರಾಮಸ್ಥರು, ಈಗ ಇರುವ ದೇವರನ್ನೇ ಕಟ್ಟಿ ಹಾಕಿ ಪಲ್ಲಕ್ಕಿಯಲ್ಲಿ ಹೊತ್ತು ಮೂಲ ವಿಗ್ರಹ ಹುಡುಕಿಕೊಡು ಅಂತಾ ಪ್ರಶ್ನೆ ಹಾಕಿದ್ರು.
Advertisement
ಹೌದು.. 200 ವರ್ಷದ ಹಿಂದೆ ರಾಮೋಹಳ್ಳಿಯಲ್ಲೊಂದು ದೇವಸ್ಥಾನ ಇತ್ತಂತೆ. ಕಾಲಕ್ರಮೇಣ ಇದು ಪಾಳು ಬಿದ್ದು ನೆಲಸಮವಾಗಿತ್ತು. ಕೆಲವರ ಪ್ರಕಾರ ಈ ವಿಗ್ರಹವನ್ನು ಅನೇಕರು ಕದ್ದೊಯ್ಯಲು ಪ್ರಯತ್ನ ಪಟ್ಟಿದ್ರಂತೆ. ಆದರೆ ಅಲ್ಲೇ ಸಿಡಿಲು ಬಡಿದು ಸತ್ತು ಹೋಗಿದ್ರಂತೆ. ಹೀಗಾಗಿ ದೇವರ ಮೂರ್ತಿ ಎಲ್ಲಿ ಹೋಯ್ತು ಅನ್ನೋದು ಜನರಿಗೆ ಗೊತ್ತಾಗಲಿಲ್ಲ. ಅದಾದ ಬಳಿಕ ಕಳೆದ ವರ್ಷ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.
Advertisement
Advertisement
ಮೂಲ ವಿಗ್ರಹಕ್ಕಾಗಿ ದೇವಿಯ ಮುಂದೆ ಕವಡೆ ಹಾಕಿ ಪ್ರಶ್ನೆ ಇಟ್ಟಿದ್ದಾರೆ. ನಂತರ ದೇವಿಯ ಪಲ್ಲಕ್ಕಿ ಹೊತ್ತು ವಿಗ್ರಹಕ್ಕೆ ಕಳೆದ ವಾರದಿಂದ ಹುಡುಕಾಟ ನಡೆಸಿದ್ದಾರೆ. ಆಗ ಎರಡು ದೇವಿಯ ವಿಗ್ರಹ ಸಿಕ್ಕಿತ್ತು. ಇನ್ನೊಂದು ಮೂರ್ತಿ ಇರುವ ಬಗ್ಗೆಯೂ ಪ್ರಶ್ನೆಯಲ್ಲಿ ಗೊತ್ತಾಯ್ತು. ಅದಕ್ಕಾಗಿ ಇಂದು ಮತ್ತೆ ದೇವಿಯನ್ನು ಜಾಗ ತೋರಿಸುವಂತೆ ಪ್ರಶ್ನೆ ಇಟ್ಟು ಪಲ್ಲಕ್ಕಿ ಹೊತ್ತು ಸಾಗಿದ್ದಾರೆ. ಹುತ್ತದ ಬಳಿ ದೇವಿ ಪಲ್ಲಕ್ಕಿ ಬಂದು ನಿಂತಿದೆ. ಬಳಿಕ ಹುತ್ತವನ್ನೇ ಕೆಡವಿದ್ದಾರೆ. ಆಗ ಹಳೆಯ ಕಾಲ ಮಣ್ಣಿನಡಿಯಲ್ಲಿ ಹೂತು ಹೋದ ಲಿಂಗಸ್ವರೂಪಿ ವಿಗ್ರಹ ಹಾಗೂ ಕಮಂಡಲ ಪತ್ತೆಯಾಗಿದೆ.
Advertisement
ದೇವಿಯ ಪವಾಡಕ್ಕೆ ಉಘೇ ಅಂದ ಜನ: ಹುತ್ತದಲ್ಲಿ ಸಿಕ್ಕಿದ ಲಿಂಗಸ್ವರೂಪಿ ವಿಗ್ರಹವನ್ನು ತೆರೆದು ನೋಡಿದಾಗ ಪುರಾತನ ಗಣೇಶನ ಮೂರ್ತಿ ಪತ್ತೆಯಾಗಿದೆ .ಮೂರು ಕೆಜಿ ಇರುವ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸ್ದಾರೆ. ಪುರಾತನ ಲಿಪಿ ಸರ್ಪದ ಕೆತ್ತನೆ ಸೂರ್ಯನ ಕೆತ್ತನೆಯ ವಿಗ್ರಹ ಬಲು ಅಪರೂಪವಾಗಿದೆ. ಇದು ದೇವರ ಮಹಿಮೆ. ಇದನ್ನು ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡುತ್ತೇವೆ ಅಂತಾ ಪುರೋಹಿತರು ಹೇಳಿದ್ರು.
ಇದು ಪವಾಡವೋ ವಿಸ್ಮಯವೋ ಇದನ್ನೆಲ್ಲ ನಂಬಬೇಕೋ ಬೇಡ್ವೋ ಎಲ್ಲವೂ ಜನ್ರ ಅವರವರ ನಂಬಿಕೆ ವಿಮರ್ಶೆಗೆ ಬಿಟ್ಟಿದ್ದು. ಆದರೆ 200 ವರ್ಷದ ಹಿಂದೆ ಕಳೆದು ಹೋದ ವಿಗ್ರಹ ಮತ್ತೆ ಸಿಕ್ಕಿದ ಖುಷಿಯಲ್ಲಿ ಗ್ರಾಮದ ಜನ ಇದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಪಕ್ಷಿ ಬಡಿದು ಎಮರ್ಜನ್ಸಿ ಲ್ಯಾಂಡಿಂಗ್