ಬೆಂಗಳೂರು: ಶಿವರಾತ್ರಿ (Shivratri) ದಿನ ಹೋಟೆಲನ್ನು ಮತ್ತೆ ತೆರೆಯಲಾಗುವುದು ಎಂದು ರಾಮೇಶ್ವರಂ ಕೆಫೆ (Rameshwaram Cafe) ಮಾಲೀಕ ರಾಘವೇಂದ್ರ ರಾವ್ (Raghavendra Rao) ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾರ್ಚ್ 8 ಶುಕ್ರವಾರ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಆರಂಭವಾಗಲಿದೆ. ಎಲ್ಲಾ ಹೋಟೆಲ್‌ಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಿ, ಬ್ಯಾಗ್ ಚೆಕ್ ಮಾಡಿ ಒಳಗೆ ಬಿಡುವಂತೆ ಪೊಲೀಸರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ
Advertisement
Advertisement
ಘಟನೆಯಲ್ಲಿ ಗಾಯವಾದ ಗಾಯಾಳುಗಳ ಜೊತೆ ನಾವಿದ್ದೇವೆ. ನಮಗೆ ಯಾರ ಬಗ್ಗೆಯೂ ಅನುಮಾನವಿಲ್ಲ. ಹೋಟೆಲಿನಲ್ಲಿ ಇರುವ ಪ್ರತಿಯೊಬ್ಬರು ನಮಗೆ ಅಣ್ಣ ತಮ್ಮಂದಿರು ಎಂದರು. ಇದನ್ನೂ ಓದಿ: ಬೆಂಗಳೂರಿನ ಬಾಂಬರ್ ಒಂಟಿ ತೋಳ ಭಯೋತ್ಪಾದಕ!
Advertisement
Advertisement
ನಾವೆಲ್ಲ ಎಂಜಿನಿಯರ್ಸ್, ಆಗೆಲ್ಲ ನಮಗೆ ಕೆಲಸ ಸಿಗ್ತಿರಲಿಲ್ಲ. ಆಗ 2012ರಲ್ಲಿ ಫುಟ್‍ಪಾತ್‍ಲ್ಲಿ ರಾಮೇಶ್ವರಂ ಕೆಫೆ ಆರಂಭಿಸಿದ್ದು. ಅಬ್ದುಲ್ ಕಲಾಂ ಅವರಿಂದ ಪ್ರೇರಣೆ ಪಡೆದು, ಅವರ ಜನ್ಮಸ್ಥಳದ ಹೆಸರಿಟ್ಟಿದ್ದೇವೆ. ನಮ್ಮ ಹೋಟೆಲ್‍ನಲ್ಲಿ ಕೆಲಸ ಮಾಡುವವರು ಎಲ್ಲಾ ಹಳ್ಳಿ ಮಕ್ಕಳು. ಒಂದಲ್ಲ ಒಂದು ರೀತಿಯಲ್ಲಿ ಯಾರಿಗೂ ಬೇಡವಾದವರ ಆಶ್ರಯ ತಾಣ ಇದಾಗಿದೆ. ಓದು ಹತ್ತದೆ, ಮನೆಯಿಂದ ಹೊರಗೆ ಹಾಕಲ್ಪಟ್ಟವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.