ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ? – ಬಿಜೆಪಿ ಕಿಡಿ
ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe ) ಬಾಂಬ್ ಸ್ಫೋಟ ಪ್ರಕರಣವನ್ನು (Bomb Blast Case) ಸಿಲ್ಲಿ ಪ್ರಕರಣ ಎಂದು ಹೇಳಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಜನತೆಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಕಲಬುರಗಿಯ ಜಯದೇವ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಶರಣಪ್ರಕಾಶ್ ಪಾಟೀಲ್, ರಾಜ್ಯದಲ್ಲಿ ಶಾಂತಿ ಭಂಗ ಮಾಡೋಕೆ ಕೆಲವರು ಸೃಷ್ಟಿ ಮಾಡುತ್ತಾರೆ. ನಮ್ಮ ಸರ್ಕಾರ ಇವುಗಳಿಗೆಲ್ಲ ಸೊಪ್ಪು ಹಾಕುವುದಿಲ್ಲ.ನಮ್ಮ ಗುರಿ ರಾಜ್ಯದ ಅಭಿವೃದ್ಧಿ. ಇಂತಹ ಸಣ್ಣ ಘಟನೆಗೆ ನಾವು ವಿಚಲಿತರಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್
Advertisement
ಈ ರೀತಿ ಕೃತ್ಯ ಪ್ರತಿ ದಿನ ನಡೆಯುವುದಿಲ್ಲವಲ್ಲ. ಬಿಗಿ ಭದ್ರತೆಯ ಸಂಸತ್ ಭವನದಲ್ಲೇ ದೊಡ್ಡ ಘಟನೆ ನಡೆದಿದೆ. ದಿಸ್ ಆರ್ ಆಲ್ ಫ್ರಿಂಜ್ ಎಲಿಮೆಂಟ್ಸ್. ಇದೊಂದು ಸಿಲ್ಲಿ ಅಂಟೆಪ್ಟ್ ಎಂದು ತಿಳಿಸಿದರು. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ
Advertisement
ನಾನು ಸಿಲ್ಲಿ ಅಂದಿಲ್ಲ:
ತನ್ನ ಹೇಳಿಕೆ ಸುದ್ದಿಯಾಗುತ್ತಿದ್ದಂತೆ ಶರಣಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಕೆಲವು ಶಕ್ತಿಗಳು ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ ಆ ಪ್ರಕರಣವನ್ನು ಉಲ್ಲೇಖಿಸಿ ಸಿಲ್ಲಿ ಅಂತಾ ಹೇಳಿದ್ದೆನೆ ಹೊರತು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಹೇಳಿಲ್ಲ. ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ದೇಶದ್ರೋಹದ ಕೆಲಸವಾಗಿದ್ದು ಉಗ್ರರ ಕೃತ್ಯಕ್ಕೆ ನಾನು ಸಿಲ್ಲಿ ಅಂತಾ ಹೇಳಿಲ್ಲ. ರಾಜಕೀಯ ಅಸ್ಥಿರ ಮಾಡುವ ಪ್ರಯತ್ನ ನಡೆಯುತ್ತಿವೆ ಅದಕ್ಕೆ ನಾನು ಸಿಲ್ಲಿ ಎಂದಿದ್ದೇನೆ ಎಂದು ಹೇಳಿದರು.
Advertisement
ಬಿಜೆಪಿ ಕಿಡಿ:
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ. ನೂರಾರು ಜನ ಸತ್ತರೆ ಮಾತ್ರ ಅದು ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ, ಅದೇ ಹತ್ತು ಜನ ಬಾಂಬ್ ಸ್ಪೋಟದಿಂದ ಗಾಯಗೊಂಡರೆ, ಅದು ನಿಮಗೆ ಸಿಲ್ಲಿ ಅಟೆಂಪ್ಟು. ಬಾಂಬ್ ಇಟ್ಟವನು ಬ್ರದರ್, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಬಿಜೆಪಿ ಕಿಡಿಕಾರಿದೆ.