– ಬಿಸಿನೆಸ್ ದ್ವೇಷ ಅಂತ ಕಥೆ ಕಟ್ಟುತ್ತಿದೆ
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು (Brand Bengaluru) ಮಾಡದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು (Bomb Bengaluru) ಎಂಬ ಕಳಂಕ ತರಬೇಡಿ ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆದ ಬಾಂಬ್ ಸ್ಫೋಟ ಜನಸಾಮಾನ್ಯರ ಎದೆ ನಡುಗಿಸಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಿನೇ ದಿನೇ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಪೋಸ್ಟ್‌ನಲ್ಲಿ ಏನಿದೆ?
ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಪದೇ ಪದೇ ಅನುಸರಿಸುತ್ತಿರುವ ತುಷ್ಟೀಕರಣ, ಓಲೈಕೆ ರಾಜಕಾರಣದ ಫಲವಾಗಿ ಇಂದು ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ, ಸಮಾಜ ಘಾತುಕ ಶಕ್ತಿಗಳಿಗೆ ರೆಕ್ಕೆ ಪುಕ್ಕ ಬಂದು ಕಾನೂನಿನ ಭಯ ಇಲ್ಲದಂತಾಗಿದ್ದು ಪೊಲೀಸರ ನೈತಿಕ ಸ್ಥೈರ್ಯಕ್ಕೆ, ಗುಪ್ತಚರ ಇಲಾಖೆಯ ಕಾರ್ಯದಕ್ಷತೆಗೆ ಧಕ್ಕೆ ತಂದಿದೆ.
Advertisement
ಇಂದಿನ ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನ ಎನ್‌ಐಎಗೆ ಒಪ್ಪಿಸಬೇಕು. ಕಾಂಗ್ರೆಸ್ ಸರ್ಕಾರ ಇನ್ನು ಮುಂದಾದರೂ ಕರ್ನಾಟಕದ ಜನತೆಗೆ, ಬೆಂಗಳೂರಿಗೆ ಶಾಂತಿ ಸುರಕ್ಷತೆಯ ಗ್ಯಾರೆಂಟಿ ನೀಡುವತ್ತ ಗಮನಹರಿಸಬೇಕು. ಇದನ್ನೂ ಓದಿ: ರವೆ ಇಡ್ಲಿ ತಿಂದು ಬಾಂಬ್ ಇಟ್ಟ ಬಾಂಬರ್ – ಡಿಕೆಶಿ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ತನ್ನ ಉಡಾಫೆ, ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದು ತನಿಖೆ ಮುಗಿಯುವ ಮುನ್ನವೇ ಇದು ಸಿಲಿಂಡರ್ ಬ್ಲಾಸ್ಟ್, ಬಿಸಿನೆಸ್ ದ್ವೇಷದಿಂದ ಮಾಡಿರುವುದು ಎಂದು ಕಥೆ ಕಟ್ಟುತ್ತಿದೆ. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದ ಪ್ರಕರಣದಲ್ಲೂ ಸಹ ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರೂ ಕೂಗಿಯೇ ಇಲ್ಲ, ವಿಡಿಯೋ ತಿರುಚಲಾಗಿದೆ, ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ಕಥೆ ಕಟ್ಟಿದ್ದ ಕಾಂಗ್ರೆಸ್ ನಾಯಕರು ಇಂತಹ ದೇಶದ್ರೋಹಿ ಘಟನೆ ನಡೆದಾಗಲೆಲ್ಲಾ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತದೆ? ತಪ್ಪಿತಸ್ಥರನ್ನು ಹಿಡಿಯದಂತೆ ಯಾವ ಒತ್ತಡ ಕಾಂಗ್ರೆಸ್ ಸರ್ಕಾರವನ್ನು ತಡೆಯುತ್ತಿದೆ? ಕನ್ನಡಿಗರ ಈ ಪ್ರಶ್ನೆಗಳಿಗೆ, ಅನುಮಾನಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ನೀಡಬೇಕು.