ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯ (Rameshwaram Cafe) ಗ್ರಾಹಕರ ಏರಿಯಾದಲ್ಲಿ ಬಾಂಬ್ ಸ್ಫೋಟಗೊಂಡು (Bengaluru Bomb Blast) 9 ಮಂದಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ 12:55ಕ್ಕೆ 10 ಸೆಕಂಡ್‌ಗಳ ಅಂತರದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಹೋಟೆಲ್‌ನಲ್ಲಿ (Hotel) ಊಟ ತಿಂಡಿ ತಿನ್ನುತ್ತಿದ್ದ ಜನ ಎದ್ನೋಬಿದ್ನೋ ಎಂದು ಓಡಿದ್ದಾರೆ.
Advertisement
ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರ ಕಿವಿಗಳಿಗೆ, ಒಬ್ಬರ ಕಣ್ಣಿಗೆ ಹಾನಿಯಾಗಿದೆ. ಸ್ಥಳದಲ್ಲಿ ಬ್ಯಾಟರಿ, ನಟ್, ಬೋಲ್ಟ್ ಪತ್ತೆಯಾಗಿದೆ. ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ರವೆ ಇಡ್ಲಿ ತಿಂದು ಬಾಂಬ್ ಇಟ್ಟ ಬಾಂಬರ್ – ಡಿಕೆಶಿ
Advertisement
ಯಾರಿಗೆಲ್ಲಾ ಗಾಯ?
* ಫಾರೂಖ್ – 19 ವರ್ಷ – ಹೋಟೆಲ್ ಸಿಬ್ಬಂದಿ
* ದೀಪಾಂಶು – 23 ವರ್ಷ – ಗ್ರಾಹಕ (ಅಮೆಜಾನ್ ಕಂಪನಿ ಉದ್ಯೋಗಿ)
* ಸ್ವರ್ಣಾಂಬಾ – 40 ವರ್ಷ – ಗ್ರಾಹಕ (40% ಸುಟ್ಟ ಗಾಯ)
* ಮೋಹನ್ – 41 ವರ್ಷ – ಗ್ರಾಹಕ
* ನಾಗಶ್ರೀ – 35 ವರ್ಷ – ಗ್ರಾಹಕ (ಕಣ್ಣಿಗೆ ಹಾನಿ)
* ಮೋಮಿ – 30 ವರ್ಷ – ಗ್ರಾಹಕ
* ಬಲರಾಮ್ ಕೃಷ್ಣನ್ – 31 ವರ್ಷ – ಗ್ರಾಹಕ
* ನವ್ಯಾ – 25 ವರ್ಷ – ಗ್ರಾಹಕ
* ಶ್ರೀನಿವಾಸ್ – 67 ವರ್ಷ – ಗ್ರಾಹಕ ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?
Advertisement
Advertisement
ಬಾಂಬ್ ಬ್ಲಾಸ್ಟ್ ಸಮಯ
11:35 – ಹೋಟೆಲ್‌ಗೆ ಬಾಂಬರ್ ಆಗಮನ
11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್ ಖರೀದಿ
11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ
11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
12:55 – ಬಾಂಬ್ ಸ್ಫೋಟ