ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ (Rameshwaram Cafe Blast Case) ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.
ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿದ ಬಳಿಕ ಬಾಂಬರ್ ಬೈಕ್‌ನಲ್ಲಿ (Bike) ತೆರಳಿದ್ದ. ಬೈಕ್ ನಂಬರ್ ಆಧಾರಿಸಿ ಮಾಲೀಕನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ಬಂದಿದೆ.
Advertisement
Advertisement
ಕಪ್ಪು ಬ್ಯಾಗ್ (Black Bag) ಬೆನ್ನಿಗೆ ಹಾಕಿಕೊಂಡು ಹೋಟೆಲಿಗೆ ಬಂದಿದ್ದ ಬಾಂಬರ್ ತಿಂಡಿ ತಿಂದ ಬಳಿಕ ಹ್ಯಾಂಡ್‌ವಾಶ್ ಮಾಡುವ ಜಾಗದಲ್ಲಿ ಬ್ಯಾಗ್ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿ(CCTV) ಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದೆ. ಈ ದೃಶ್ಯವನ್ನು ಆಧಾರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರವೆ ಇಡ್ಲಿ ತಿಂದು ಬಾಂಬ್ ಇಟ್ಟ ಬಾಂಬರ್ – ಡಿಕೆಶಿ
Advertisement
Advertisement
ಬಾಂಬ್ ಬ್ಲಾಸ್ಟ್ ಸಮಯ
11:35 – ಹೋಟೆಲ್‌ಗೆ ಬಾಂಬರ್ ಆಗಮನ
11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್ ಖರೀದಿ
11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ ಆರೋಪಿ
11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
12:55 – ಬಾಂಬ್ ಸ್ಫೋಟ