ಬೆಂಗಳೂರು: ಮಹಾ ಮಳೆ ಪ್ರವಾಹ (Rain Flood) ದ ಅಬ್ಬರ ಬೆಂಗಳೂರು (Bengaluru) ನೊಂದಕಾಳೂರು ಆಗಿದೆ. ಜನರ ಸಂಕಷ್ಟದ ಕಣ್ಣೀರಿನ ಕಥೆಯೊಂದಿಗೆ ದೇವರಿಗೂ ಜಲ ದಿಗ್ಬಂಧನ ಇನ್ನೂ ಕಾಟ ಕೊಡ್ತಿದೆ. ಮಹದೇವಪುರ (Mahadevapura) ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ.
ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು ಅರ್ಚಕರು ಭಕ್ತರು ಹೋಗುವಂತೆ ಇಲ್ಲ. ಹೀಗಾಗಿ ಪೂಜೆಯೂ ಇಲ್ಲ. ಗ್ರಾಮ ದೇವರಿಗೇ ಹೀಗಾಗಿದೆ. ಇನ್ನು ನಮ್ಮ ಪರಿಸ್ಥಿತಿ ಇದಕ್ಕಿಂತಲೂ ಕಡೆಯಾಗಿದೆ ಅಂತಾ ಜನ ಬೇಸರ ವ್ಯಕ್ತಪಡಿಸಿದರು.
ಬೆಳ್ಳಂದೂರಿನ ಭಾಗದ ಹತ್ತೂರಿನ ಗ್ರಾಮದೇವತೆ ದುಗ್ಗಲಮ್ಮನ ಪರಿಸ್ಥಿತಿಯೂ ಹೀಗೆ ಆಗಿದೆ. ದೇಗುಲದಲ್ಲಿ ಇನ್ನೂ ನೀರು ನಿಂತಿದೆ. ಮಣ್ಣು ಕೆಸರು ಇರೋದ್ರಿಂದ ದೇವಸ್ಥಾನ (Temple) ಕ್ಕೆ ಕಾಲಿಡಲು ಸಾಧ್ಯವಾಗ್ತಿಲ್ಲ. ಹೀಗಾಗಿ ಪೂಜೆಯೂ ನಡೆಯುತ್ತಿಲ್ಲ. ಶುಕ್ರವಾರದ ವಿಶೇಷ ಪೂಜೆಯೂ ದೇವಿಗೆ ಈ ಬಾರಿ ಇಲ್ಲ.
ಒಟ್ಟಿನಲ್ಲಿ ಬೆಳ್ಳಂದೂರು (Bellandur), ಯಮಲೂರು (Yamaluru) ಭಾಗವಂತೂ ಮಳೆ ನಿಂತರೂ ಅದರ ಅವಾಂತರದಿಂದ ಜನ ಹೊರಗೆ ಬಂದಿಲ್ಲ. ಇದನ್ನೂ ಓದಿ: ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಬಸ್ – 7 ಮಂದಿಗೆ ಗಾಯ, ತಪ್ಪಿದ ಭಾರೀ ಅನಾಹುತ