ಬೆಂಗಳೂರು: ರೈಲ್ವೆ ಟಿಕೆಟ್‍ನ ಬುಕ್ಕಿಂಗ್ ಅಲ್ಲಿ ವಂಚನೆ ಮಾಡಿ ಸಿಕ್ಕಿ ಬಿದ್ದ ಗುಲಾಂ ಮುಸ್ತಾಫ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಟಿಕೆಟ್ ವಂಚನೆಯ ಬಗ್ಗೆ ರೈಲ್ವೆ ಇಲಾಖೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗೊಂದಲವಿತ್ತು. ಆನ್‍ಲೈನ್ ಟಿಕೆಟ್ ಓಪನ್ ಆಗುತ್ತಿದ್ದಂತೆ ಕೆಲವೇ ಸೆಕೆಂಡ್‍ಗಳಲ್ಲಿ ಎಲ್ಲವೂ ಮಾರಾಟವಾಗುತಿತ್ತು. ಆದರೆ ಹ್ಯಾಕ್ ಮಾಡಲಾದ ವೆಬ್‍ಸೈಟ್‍ನಿಂದ ಈ ಕೃತ್ಯ ನಡೆಯುತ್ತಿತ್ತು. ಕೊಂಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ ಎಂಬ ಪಕ್ಕ ಮಾಹಿತಿ ದೊರೆತಿತ್ತು.
Advertisement
ಈ ಮಾಹಿತಿ ಆಧರಿಸಿ ಬೆನ್ನತ್ತಿದ ಯಶವಂತಪುರ ರೈಲ್ವೆ ಅಧಿಕಾರಿಗಳು ಹನುಮಂತರಾಜುನನ್ನು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಜಾರ್ಖಂಡ್ ಮೂಲದ ಗುಲಾಮ್ ಮುಸ್ತಫಾನನ್ನು ಬಂಧಿಸಿದ ಪೊಲೀಸರು ಆರೋಪಿಗಳು ಪ್ರಯಾಣಿಕರಿಗೆಂದು ನೀಡಲಾಗಿದ್ದ ಆನ್‍ಲೈನ್ ಇ-ಟಿಕೆಟ್‍ನ ಐ.ಆರ್.ಟಿ.ಸಿ ವೆಬ್‍ಸೈಟ್‍ನಲ್ಲಿ ನಕಲಿ ದಾಖಲೆ ನೀಡಿ ಎಎನ್‍ಎಂಎಸ್ ಎಂಬ ಹ್ಯಾಕ್ ವೆಬ್‍ಸೈಟ್ ಮುಖಾಂತರ ಟಿಕೆಟ್ ವಂಚನೆ ಮಾಡುತ್ತಿದ್ದರು. ಇದರಲ್ಲಿ ಸಾವಿರಾರು ಮಂದಿ ಇರುವ ದೊಡ್ಡ ಜಾಲವಿದೆ ಎಂಬ ಮಾಹಿತಿ ಪಡೆದ ಅಧಿಕಾರಿಗಳು, ಪ್ರಕರಣಕ್ಕೆ ಮೇಜರ್ ಬ್ರೇಕ್ ದೊರೆತ ಖುಷಿಯಲ್ಲಿದ್ದರು. ಆದರೆ ಈ ನಡುವೆ ಆತನ ಬಳಿ ಇದ್ದ ಲ್ಯಾಪ್‍ಟಾಪ್‍ನಲ್ಲಿದ್ದ ಕೆಲ ಮಾಹಿತಿ ಅಧಿಕಾರಿಗಳು ದಂಗಾಗುವಂತೆ ಮಾಡಿತ್ತು.
Advertisement
Advertisement
ಬಂಧಿತ ಗುಲಾಮ್ ಮುಸ್ತಾಫ ಬಳಿ ಇದ್ದ ಲ್ಯಾಪ್‍ಟಾಪ್‍ನಲ್ಲಿ ಕೆಲವು ಸಂಶಯಾಸ್ಪದ ವಿಚಾರಗಳಿದ್ದು, ಇವು ಕೇಂದ್ರ ಸರ್ಕಾರದ ಕೆಲ ಗುಟ್ಟುಗಳು ಎನ್ನಲಾಗಿವೆ. ಸರ್ಕಾರಕ್ಕೆ ಸಂಬಂಧಿಸಿದ ವೆಬ್‍ಸೈಟ್‍ಗಳು ಹಾಗೂ ಅದರ ವಿವರ, ಲಿಂಕ್ಸ್ ಎಂಬ ದೊಡ್ಡ ವೆಬ್‍ಸೈಟ್‍ಗಳ ಹ್ಯಾಕ್ ಮಾಡುವ ಸಾಫ್ಟ್ ವೇರ್, ಕೆಲವು ಬ್ಯಾಂಕ್‍ಗಳ 3 ಸಾವಿರ ಖಾತೆಗಳ ವಿವರ ಸೇರಿದಂತೆ ಹಲವು ಮಾಹಿತಿಗಳಿದ್ದವು. ಪಾಕಿಸ್ತಾನ ಹಾಗೂ ಬಾಂಗ್ಲಾ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಭಯೋತ್ಪಾದನೆಯ ಚಟುವಟಿಕೆಯ ಶಂಕೆ ಮೂಡಿದೆ.
Advertisement
ಬಂಧಿತ ಗುಲಾಮ್ ಮುಸ್ತಾಫನ ಲ್ಯಾಪ್‍ಟಾಪ್‍ನ ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ವೇಳೆ ಆತಂಕ ಮೂಡಿಸುವ ಕೆಲವು ಡಿಜಿಟಲ್ ಫುಟ್‍ಪ್ರಿಂಟ್‍ಗಳು ಪತ್ತೆಯಾಗಿದ್ದು, ಈ ಹಿಂದೆ ಇಸ್ರೋಗೆ ಸಂಬಂಧಿಸಿದ ಕೆಲ ಮಾಹಿತಿಗಳ ಸರ್ಚ್ ಮಾಡಿರೋದು ಪತ್ತೆಯಾಗಿದೆ. ಅದರ ಜೊತೆಗೆ ಇಸ್ರೋನ ಕಾರ್ಟೋಸ್ಯಾಟನ್ ಬಗೆಗಿನ ಕೆಲ ಮಾಹಿತಿಗಳು ಈತನ ಬಳಿ ಲಭ್ಯವಾಗಿದ್ದು, ಈ ಬಗ್ಗೆ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡಿ ರೈಲ್ವೆ ಅಧಿಕಾರಿಗಳು ದೂರು ನೀಡಿದ್ದಾರೆ.