ಬೆಂಗಳೂರು: ರೈಲ್ವೆ ನಿಲ್ದಾಣಗಳಲ್ಲಿ ನಕಲಿ ರೈಲ್ವೆ ಟಿಕೆಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಕ್ಯೂಆರ್ ಕೋಡ್ ಟಿಕೆಟ್ ವಿತರಣೆಗೆ ಕ್ರಮಕೈಗೊಂಡಿದ್ದಾರೆ.
ಬೆಂಗಳೂರು ನಗರದಿಂದ ರಾಜ್ಯ, ಹೊರ ರಾಜ್ಯಗಳಿಗೆ ನಿತ್ಯ ರೈಲು ಮೂಲಕ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲ ಪ್ರಯಾಣಿಕರು ಅನ್ ರಿಸರ್ವ್ಡ್, ಜನರಲ್ ಟಿಕೆಟ್‌ಗಳನ್ನ ನಕಲು ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ, ಅಕ್ರಮ ತಡೆಯಲು ಕ್ಯೂಆರ್ ಕೋಡ್ ಟಿಕೆಟ್ ವಿತರಣೆಗೆ ಮುಂದಾಗಿದೆ.
Advertisement
Advertisement
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಥರ್ಮಲ್ ಪ್ರಿಂಟರ್‌ಗಳನ್ನು ಪರಿಚಯಿಸಲಾಗಿದೆ. ನಿಲ್ದಾಣದ ಮುಖ್ಯದ್ವಾರದ ಎರಡು ಕೌಂಟರ್‌ಗಳನ್ನು ತೆರೆಯಲಾಗಿದೆ. ಕೇವಲ ಎರಡೇ ಸೆಕೆಂಡ್‌ನಲ್ಲಿ ಟಿಕೆಟ್ ಪ್ರಿಂಟಿಂಗ್ ಆಗುತ್ತೆ. ಇದರಿಂದ ಕ್ಯೂ ತಪ್ಪಿಸಿ, ಸಮಯ ಉಳಿಸಬಹುದು. ಮೆಜೆಸ್ಟಿಕ್, ಎಸ್‌ಎಂವಿಟಿ ಸ್ಟೇಷನ್, ಯಶವಂತಪುರ, ಕೆಆರ್ ಪುರಂನಲ್ಲಿ ಈ ಥರ್ಮಲ್ ಪ್ರಿಂಟಿಂಗ್ ಟಿಕೆಟ್ ವ್ಯವಸ್ಥೆಯನ್ನ ಮಾಡಲಾಗಿದೆ. ಈ ಟಿಕೆಟ್ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಟಿಟಿಗಳಿಗೆ ಪ್ರತ್ಯೇಕ ಆ್ಯಪ್‌ನ ವ್ಯವಸ್ಥೆ ಮಾಡಲಾಗಿದೆ.
Advertisement
Advertisement
ಥರ್ಮಲ್ ಪ್ರಿಂಟರ್ ಮೂಲಕ ನೀಡಿದ ಮುದ್ರಿತ ಟಿಕೆಟ್‌ಗಳನ್ನು ನಕಲು ಮಾಡುವುದು ಅಸಾಧ್ಯ. ಸಾಮಾನ್ಯ ಪ್ರಿಂಟರ್‌ಗಳಲ್ಲಿ 20 ಸೆಕೆಂಡ್‌ಗೆ ಒಂದು ಟಿಕೆಟ್ ನೀಡಿದರೆ, ಥರ್ಮಲ್ ಪ್ರಿಂಟರ್‌ನಲ್ಲಿ ಎರಡರಿಂದ 3 ಸೆಕೆಂಡ್‌ಗೆ ಒಂದು ಟಿಕೆಟ್ ನೀಡಲಾಗುತ್ತದೆ.