ಬೆಂಗಳೂರು: ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ತಮ್ಮ ಸಹೋದರನ ಮದುವೆಯಲ್ಲಿ ಮೆಹಂದಿ ಹಾಕಿಕೊಂಡು ಮಿಂಚಿದ್ದಾರೆ.
ತಮ್ಮ ಸಹೋದರನ ಮದುವೆಯಲ್ಲಿ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಫೋಟೋ ತೆಗೆಸಿಕೊಂಡಿರುವ ರಾಗಿಣಿ ಅವರು, ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿರುವ ರಾಗಿಣಿ ಅವರು, ಎರಡು ಕೈಗಳಿಗೆ ಸಂಪೂರ್ಣವಾಗಿ ಮೆಹಂದಿಯನ್ನು ಬಿಡಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸ್ಮೈಲ್ ಅಂಡ್ ಪೋಸ್ ಸಹೋದರನ ಮದುವೆ ಸಂಭ್ರಮದಲ್ಲಿ ಮೆಹಂದಿ ರಾತ್ರಿಯನ್ನು ಕುಟುಂಬದ ಜೊತೆ ಕಳೆಯುವುದು ತುಂಬ ಖುಷಿಕೊಡುತ್ತದೆ. ನಮ್ಮ ಸಂಪ್ರದಾಯಗಳು ಯಾವಾಗಲೂ ನಮ್ಮನ್ನು ಖುಷಿಯಾಗಿ ಇರುವಂತೆ ಮಾಡುತ್ತವೆ ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/B8TVs3TAZ8i/
Advertisement
ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಗಿಣಿ ಆಗಾಗ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣಕ್ಕೆಂದು ಬಾದಾಮಿಗೆ ಹೋಗಿದ್ದ ರಾಗಿಣಿ ಅಲ್ಲಿಯ ಕಾವೇರಿ ಹೋಟೆಲ್‍ನಲ್ಲಿ ನಾಟಿ ಶೈಲಿಯ ಊಟವನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.
Advertisement
ಇದಕ್ಕೂ ಮುನ್ನ ರಾಗಿಣಿ ಲೇಸ್‍ನಲ್ಲಿ ಆಮ್ಲೆಟ್ ತಯಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರು ತರಾಟೆ ಕ್ಲಾಸ್ ತೆಗೆದುಕೊಂಡಿದ್ದರು. ರಾಗಿಣಿ ತಮ್ಮ ಮನೆಯಲ್ಲಿ ಹೊಸ ರೆಸಿಪಿಯನ್ನು ತಯಾರಿಸಿದ್ದರು. ಅಡುಗೆ ಮಾಡುತ್ತಿರುವ ವಿಡಿಯೋವನ್ನು ರಾಗಿಣಿ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಗಿಣಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಈ ವಿಡಿಯೋದಲ್ಲಿ ರಾಗಿಣಿ `ಲೇಸ್ ಆಮ್ಲೆಟ್’ ಎನ್ನುವ ಹೊಸ ರೆಸಿಪಿ ಮಾಡಿದ್ದರು. ಮೊದಲಿಗೆ ನಾಲ್ಕು ಮೊಟ್ಟೆಯನ್ನು ಒಂದು ಬೌಲ್‍ಗೆ ಹಾಕಿಕೊಂಡು, ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿದ್ದಾರೆ. ನಂತರ ಅದನ್ನು ಲೇಸ್ ಚಿಪ್ಸ್ ಪಾಕೆಟ್‍ಗೆ ಸ್ವಲ್ಪ ಹಾಕಿ ಕುದಿಯುತ್ತಿರುವ ನೀರಿನೊಳಗೆ ಇಟ್ಟು ಬೇಯಿಸಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ರಾಗಿಣಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಈ ರೀತಿ ಪ್ಲಾಸ್ಟಿಕ್‍ನೊಳಗೆ ಬೇಯಿಸಿದ ಆಹಾರ ತಿನ್ನಬಾರದು, ಇದು ವಿಷ. ನಿಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಇದೇನಾ ನೀವು ಹೇಳುವ ಸಂದೇಶ ಎಂದು ರಾಗಿಣಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.
https://www.instagram.com/p/B46n4aIguSh/
ರಾಗಿಣಿ ತಯಾರಿಸಿದ ಈ ಹೊಸ ರೆಸಿಪಿಯ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಕೆಲವರು, ರೆಪಿಸಿ ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.