ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ನಟಿ ರಾಣಿಗಿಯವರು ತಮ್ಮ ಮನೆಯಿಂದ ರುಚಿಕರವಾದ ಅಡುಗೆ ತಯಾರಿಸಿ ರವಾನಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಮನೆಗೂ ಹೋಗದೆ ದಿನಪೂರ್ತಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಸೇವೆ ಮಾಡುವ ವೈದ್ಯರಿಗಾಗಿ ರಾಗಿಣಿಯವರು ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
Advertisement
#RDKITCHEN made meals for the #HealthcareHeroes from home and delivered a sumptuous dinner for 150 at the Covid government hospital last night … just doing our bit with love n care #BeatingCorona #AllInThisTogether #LockdownExtended #FoodForThought pic.twitter.com/pFuVPQaEj9
— ???? Ragini Dwivedi ???? (@raginidwivedi24) April 15, 2020
Advertisement
ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಗಿಣಿಯವರು, ಆರ್.ಡಿ ಕಿಚ್ಚನ್ ವತಿಯಿಂದ ಆರೋಗ್ಯ ರಕ್ಷಣಾ ಹೀರೋಗಳಿಗೆ ಮನೆಯಲ್ಲೇ ಊಟ ತಯಾರಿಸಿ ನೀಡಲಾಗುತ್ತಿದೆ. ಈ ಮೂಲಕ 150 ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟವನ್ನು ನಾವು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅವರಿಗಾಗಿ ಸ್ವಲ್ಪ ಪ್ರೀತಿಯಿಂದ ಏನಾದರೂ ಮಾಡೋಣ ಎಂದು ಬರೆದುಕೊಂಡಿದ್ದಾರೆ.
Advertisement
ಕೊರೊನಾ ವಿರುದ್ಧ ಯುದ್ಧ ಮಡುತ್ತಿರುವ ಸರ್ಕಾರಿ ವೈದ್ಯರಿಗಾಗಿ ರಾಗಿಣಿ ಮನೆಯಲ್ಲೇ ಊಟವನ್ನು ತಯಾರಿಸಿದ್ದಾರೆ. ರಾಗಿಣಿಯವರ ಈ ಕೆಲಸಕ್ಕೆ ಅವರ ಮನೆಯವರು ಕೂಡ ಸಾಥ್ ನೀಡಿದ್ದಾರೆ. ಮನೆಮಂದಿಯೆಲ್ಲ ಸೇರಿ ರುಚಿಕರವಾದ ಅಡುಗೆ ಮಾಡಿ ಅದನ್ನು ಮಾಸ್ಕ್ ಧರಿಸಿಯೇ ಪ್ಯಾಕ್ ಮಾಡಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಊಟ ಸಿದ್ಧಗೊಳಿಸುತ್ತಿರುವ ಫೋಟೋವನ್ನು ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
Advertisement
https://www.instagram.com/p/B-4ept2ASbM/
ಕೊರೊನಾ ವೈರಸ್ ಭೀತಿಯ ಮೊದಲ ದಿನಗಳಿಂದ ಈ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ರಾಗಿಣಿ, ಇತ್ತೀಚೆಗಷ್ಟೇ ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದ್ದರು. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
https://www.instagram.com/p/B-TuifogBJE/
ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಈ ಹಿಂದೆ ರಸ್ತೆಗೆ ಇಳಿದಿದ್ದ ರಾಗಿಣಿ, ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್‍ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್‍ಗಳನ್ನು ವಿತರಿಸಿದ್ದರು. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಂಡಿದ್ದರು.