ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪೂರಕ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇಕಡಾ 30.04 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.
ಜೂನ್ ನಲ್ಲಿ ನಡೆದಿದ್ದ ಪೂರಕ ಪರೀಕ್ಷೆಗೆ 2,31,165 ವಿದ್ಯಾರ್ಥಿಗಳು ಹಾಜರಾಗಿದ್ದರು, ಇದರಲ್ಲಿ 69,148 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ವೆಬ್ ಸೈಟ್ ಫಲಿತಾಂಶ ಲಭ್ಯವಿದ್ದು, ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
Advertisement
ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪತ್ರಿಯನ್ನು ಪಡೆಯಲು ಜುಲೈ 12 ಅಂತಿಮ ದಿನವಾಗಿದ್ದು, ಜುಲೈ 30 ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.
Advertisement
ಫಲಿತಾಂಶ ತಿಳಿಯಲು ಕೆಳಗಿನ ವೆಬ್‍ಸೈಟ್ ಲಿಂಗ್ ಮೇಲೆ ಕ್ಲಿಕ್ ಮಾಡಿ: http://www.karresults.nic.in