ಬೆಂಗಳೂರು: ಜೈಲಿನಿಂದ ಬಿಡುಡೆಯಾದ ದಿನವೇ ಮತ್ತೆ ಕಳ್ಳತನ ಮಾಡಿ ಕಳ್ಳನೋರ್ವ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಪ್ರತಾಪ್ ಅಲಿಯಾಸ್ ಗೊಣ್ಣೆ ಸಿಕ್ಕಿ ಹಾಕಿಕೊಂಡ ಆರೋಪಿ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಆರೋಪಿ ಪ್ರತಾಪ್, ಏಳು ವರ್ಷ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದನು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಏಳು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಆದರೆ ಬಂದ ದಿನ ಸಂಜೆಯೇ ಸಿಕೆ ಅಚ್ಚುಕಟ್ಟು ವ್ಯಾಪ್ತಿಯ ತ್ಯಾಗರಾಜ ನಗರದಲ್ಲಿ ಕಳ್ಳತನಕ್ಕೆ ಹೋಗಿದ್ದ ಪ್ರತಾಪ್ 400 ಗ್ರಾಂ ಒಡವೆ ನಗದು ದೋಚಿದ್ದ. ಪ್ರಕರಣವನ್ನು ಆ ದಿನವೇ ಭೇದಿಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಅದೇ ದಿನ ರಾತ್ರಿ ಪ್ರತಾಪ್‍ನನ್ನು ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.