– ಪ್ರಶಸ್ತಿ ಗೆಲ್ಲಲು 22 ತಂಡಗಳು ತೀವ್ರ ಪೈಪೋಟಿ
ಬೆಂಗಳೂರು: 2019-20ರ ಪ್ರೆಸ್ ಕ್ಲಬ್ ಹಾಗೂ ಪಿಇಎಸ್ ಯೂನಿವರ್ಸಿಟಿ ಸಹಯೋಗದಲ್ಲಿ ಇಂಟರ್ ಮೀಡಿಯಾ ಟಿ-10 ಕ್ರಿಕೆಟ್ ಟೂರ್ನಮೆಂಟ್ ಗೆ ಇಂದು ಚಾಲನೆ ಸಿಕ್ಕಿತು.
ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದವರಿಗಾಗಿ ಆಯೋಜನೆಗೊಂಡಿದ್ದ ಈ ಟೂರ್ನಮೆಂಟ್‍ನ್ನು ಕಾಂಗ್ರೆಸ್ಸಿನ ನಾಯಕ ಡಿ.ಕೆ ಶಿವಕುಮಾರ್ ಉದ್ಘಾಟಿಸಿ, ಸಖತ್ ಆಗಿ ಬ್ಯಾಟ್ ಬೀಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಬಳಿಕ ಮಾತನಾಡಿದ ಡಿಕೆಶಿ, ಪ್ರೆಸ್ ಕ್ಲಬ್ ನಿಂದ ಇದೊಂದು ಒಳ್ಳೆಯ ಕೆಲಸ. ಮಾಧ್ಯಮ ದೊಡ್ಡ ಬುನಾದಿ. ನಿಮಗೆ ನಾನು ಗೌರವ ಕೊಡಬೇಕಾದದ್ದಿದೆ. ಹೀಗಾಗಿ ನಿಮ್ಮ ಆಹ್ವಾನಕ್ಕೆ ಬಂದಿದ್ದೇನೆ ಎಂದರು.
Advertisement
Advertisement
ಮುಂದಿನ ದಿನಗಳಲ್ಲಿ ಈಡೀ ರಾಜ್ಯದ ಎಲ್ಲಾ ಪತ್ರಕರ್ತರನ್ನ ಸೇರಿಸಿಕೊಂಡು ಸ್ಪರ್ಧೆಗೆ ಅವಕಾಶ ಮಾಡಿಕೊಡಿ ಎಂದು ಪ್ರೆಸ್ ಕ್ಲಬ್ ಸದಸ್ಯರಿಗೆ ಮನವಿ ಮಾಡಿಕೊಂಡಿದರು. ನೀವು ಏನೇ ತೋರಿಸಿದರೂ ನಮ್ಮ ಒಳ್ಳೆಯದಕ್ಕಾಗಿ ತೋರಿಸ್ತೀರಿ. ನಮ್ ತರ ನೀವು ಕಿತ್ತಾಡಬೇಡಿ ಎಂದು ಹೇಳಿದರು. ಈ ವೇಳೆ ತಮ್ಮ ಬಾಲ್ಯದ ಜೀವನದ ಬಗ್ಗೆ ಮೆಲಕು ಹಾಕಿದ ಡಿ.ಕೆ.ಶಿವಕುಮಾರ್, ನಾನು ನಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಜೊತೆಗೆ, ಶಾಟ್ ಪುಟ್, ವಾಲಿಬಾಲ್ ಆಡುತ್ತಿದ್ದೆ ಇವತ್ತು ಬಹಳ ಸಂತೋಷ ಆಯ್ತು. ಬಾಲ್ಯದ ದಿನಗಳು ನೆನಪಾದವು ಅಂತ ಹೇಳಿದರು.
Advertisement
Advertisement
ಎರಡು ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್‍ನಲ್ಲಿ ಒಟ್ಟು 22 ತಂಡಗಳು ಭಾಗಿಯಾಗಿವೆ. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಕಪ್ ಗೆಲ್ಲಲು ಎಲ್ಲಾ ತಂಡಗಳು ಫುಲ್ ಜೋಶ್ ನಲ್ಲಿ ಪಂದ್ಯಗಳನ್ನು ಆಡುತ್ತಿವೆ.