ಬೆಂಗಳೂರು: ಬುಧವಾರ ತಡರಾತ್ರಿ ಗುಂಡು ಪಾರ್ಟಿ ಮುಗಿಸಿ ಡ್ರಗ್ಸ್ ಸೇವಿಸಿ ದುಬಾರಿ ಮರ್ಸಿಡಿಸ್ ಬೆಂಜ್ ಕಾರ್‍ನಲ್ಲಿ ಜಾಲಿ ಡ್ರೈವ್ ಹೋಗಿ ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ಸರಣಿ ಅಪಘಾತ ಮಾಡಿದ್ದ, ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ.
ಶುಕ್ರವಾರ ಬೆಳಗ್ಗೆ ಬಾತ್‍ರೂಮ್‍ಗೆ ಹೋಗ್ಬೇಕು ಅಂತ ಹೇಳಿ ಗನ್‍ಮ್ಯಾನ್ ಜೊತೆ ಫೈರ್ ಎಕ್ಸಿಟ್‍ನಿಂದ ಎಕ್ಸಿಟ್ ಆಗಿದ್ದಾನೆ. ಆ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
Advertisement
ಮಲ್ಯ ಆಸ್ಪತ್ರೆಗೆ ಉದ್ಯಮಿ ಆದಿಕೇಶವುಲು ಅವರ ಒಡೆತನ ಇದ್ದು, ಆಸ್ಪತ್ರೆ ನಿರ್ದೇಶಕಿ ಹಾಗೂ ವೈದ್ಯೆಯಾಗಿರುವ ತಾಯಿ ತೇಜಸ್ವಿನಿ ಅವರೇ ಮಗನ ಎಸ್ಕೇಪ್‍ಗೆ ಪ್ಲಾನ್ ನೀಡಿದ್ರು ಎನ್ನಲಾಗಿದೆ. ಆಸ್ಪತ್ರೆಯವರು ಮಾತ್ರ ರೋಗಿಯಾಗಿ ಬಂದಿದ್ದ ವಿಷ್ಣುಗೆ ಚಿಕಿತ್ಸೆ ಕೊಡ್ತಿದ್ವಿವಿ ಅಷ್ಟೆ. ಎಸ್ಕೇಪ್ ಆಗೋದಕ್ಕೆ ನಮ್ಮ ಯಾವ ಸಿಬ್ಬಂದಿಯೂ ಹೆಲ್ಪ್ ಮಾಡಿಲ್ಲ. ಎಸ್ಕೇಪ್ ಆಗಿದ್ದ ಗೊತ್ತಾದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೀವಿ ಅಂತ ಸಮಜಾಯಿಷಿ ಹೇಳಿಕೆ ಕೊಟ್ಟಿದ್ದಾರೆ.
Advertisement
ಪೊಲೀಸರಿಂದ ನಾಟಕ: ವಿಷ್ಣು ಎಸ್ಕೇಪ್ ಆಗೋದ್ರಲ್ಲಿ ಪೊಲೀಸರು ಮಹಾ ನಾಟಕ ಆಡಿದ್ರಾ ಅನ್ನೋ ಅನುಮಾನ ಮೂಡಿದೆ. ವಿಷ್ಣು ಎಸ್ಕೇಪ್ ಆಗಲು ಐಪಿಎಸ್ ಅಧಿಕಾರಿಯೊಬ್ಬರು ಸಹಕರಿಸಿದ್ದರು ಎನ್ನಲಾಗಿದೆ. ಬುಧವಾರ ಸಾರ್ವಜನಿಕರಿಂದ ಒದೆ ತಿಂದ ಬಳಿಕ ಜಯನಗರ ಪೊಲೀಸರು ಗಾಂಜಾ ಪ್ರಕರಣ ದಾಖಲಿಸಿಕೊಂಡು, ಆರೋಪಿ ವಿಷ್ಣುವಿನ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಿದ್ದರು. ಆರೋಪಿಯನ್ನ ಸರ್ಕಾರಿ ಆಸ್ಪತ್ರೆಗೆ ಸೇರಿಸೋ ಬದಲಿಗೆ ಮಲ್ಯ ಆಸ್ಪತ್ರೆಗೆ ಸೇರಿಸಿದ್ಯಾಕೆ. ಭದ್ರತೆಗೆ ಇಬ್ಬರನ್ನ ನಿಯೋಜಿಸಿದ್ರೂ ಆರೋಪಿ ಎಸ್ಕೇಪ್ ಆಗಿದ್ದು ಅವರಿಗೆ ಗೊತ್ತಾಗ್ಲಿಲ್ವಾ ಅನ್ನೋ ಶಂಕೆ ಮೂಡಿದೆ. ಆರೋಪಿ ಎಸ್ಕೇಪ್ ಆದಮೇಲೆ ಸಿಸಿಟಿವಿ ಪರಿಶೀಲಿಸಿ, ವಿಷ್ಣುವಿನ ಮನೆಗೆ ಹೋಗಿ ಸರ್ಚ್ ಮಾಡಿದ್ದೀವಿ ಅಂದಿದ್ದಾರೆ. ಈ ಮಧ್ಯೆ ಡಾ. ತೇಜಸ್ವಿನಿ ಮತ್ತು ಮಲ್ಯ ಆಸ್ಪತ್ರೆಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರಿಗೆ ಜಯನಗರ ಪೊಲೀಸರು ದೂರು ನೀಡಿದ್ದಾರೆ.
Advertisement
ಪೊಲೀಸರಿಗೆ ‘ಪಬ್ಲಿಕ್’ ಪ್ರಶ್ನೆ
* ದೊಡ್ಡವರ ಮೊಮ್ಮಗ ಅಂತ ಪೊಲೀಸರು ಈ ಕೇಸು ನಿರ್ಲಕ್ಷ್ಯ ಮಾಡಿದ್ರಾ?
* ಪೊಲೀಸ್ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಂಡಿದ್ದು ಹೇಗೆ?
* ಬೇಕಾಬಿಟ್ಟಿಯಾಗಿ ಆದಿಕೇಶವುಲು ಮೊಮ್ಮಗ ಓಡಾಡೋಕೆ ಬಿಟ್ಟ್ರಾ?
Advertisement
* ಗೊತ್ತಿದ್ದು ಗೊತ್ತಿದ್ದು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಟ್ಟಿದ್ಯಾಕೆ?
* ವಿಷ್ಣುವಿನ ತಾಯಿಯೇ ಆಸ್ಪತ್ರೆಯ ನಿರ್ದೇಶಕಿ ಅಂತ ಪೊಲೀಸರಿಗೆ ಗೊತ್ತಾಗಲಿಲ್ಲವೇ?
* ವಿಷ್ಣುವಿನ ಹೇಳಿಕೆ ಪಡೆಯಲು ಅಡ್ಡಗಾಲು ಹಾಕಿದ್ದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ?
* ವೈದ್ಯಕೀಯ ಕಾರಣ ಹೇಳಿ ಬಚಾವ್ ಮಾಡುತ್ತಿದ್ದಾರೆ ಅಂತ ಗೊತ್ತಾಗಲಿಲ್ವಾ?
* ಆರೋಪಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ದಾಖಲಿಸಲಿಲ್ಲ?
* ಕಾರಿನಲ್ಲಿದ್ದ ಮತ್ತಿತರರ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ವಾ?
* ನಿಜಕ್ಕೂ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕೇ ಇಲ್ವಾ?
ವಿಷ್ಣು ದೂರು: ನಾನು ಕಾರಿನಲ್ಲಿ ಇದ್ದೆ, ಆದರೆ ಡ್ರೈವ್ ಮಾಡ್ತಿರ್ಲಿಲ್ಲ ನನ್ನ ಡ್ರೈವರ್ ಸಂತೋಷ್ ಡ್ರೈವ್ ಮಾಡ್ತಿದ್ದ ಎಂದು ವಿಷ್ಣು ಹೇಳಿದ್ದು, ಈಗ ಸ್ಥಳೀಯರೆಲ್ಲಾ ಸೇರ್ಕೊಂಡು ಹೊಡೆದರು ಅಂತ ದೂರು ನೀಡಿದ್ದಾನೆ.
ರೇವ್ ಪಾರ್ಟಿ?: ಈ ಹಿಟ್ ಅಂಡ್ ರನ್‍ಗೆ ಮುನ್ನ ಸದಾಶಿವನಗರದ ಪಬ್ ಒಂದಲ್ಲಿ ಕಂಠಪೂರ್ತಿ ಕುಡಿದು ಡ್ರಗ್ಸ್ ತೆಗೆದುಕೊಂಡಿದ್ದ ವಿಷ್ಣು ರೇವ್ ಪಾರ್ಟಿಗೆ ಹೊರಟಿದ್ದನಂತೆ. ಸದಾಶಿವಾನಗರದಿಂದ ಎಂಜಿ ರೋಡ್‍ಗೆ ಹೋಗಿ ಅಲ್ಲಿ ಫ್ರೆಂಡ್ ಜುನೇದ್ ರನ್ನ ಪಿಕಪ್ ಮಾಡ್ಕೊಂಡು ಲಾಲ್‍ಬಾಗ್ ರೋಡ್ ಮೂಲಕ ಆಗಾಗಲೇ ರೇವ್ ಪಾರ್ಟಿಗೆ ಸಿದ್ಧತೆ ನಡೆದಿದ್ದ ಕನಕಪುರದ ರೆಸಾರ್ಟ್‍ಗೆ ಹೋಗ್ತಿದ್ರಂತೆ. ಈ ರೇವ್ ಪಾರ್ಟಿಯಲ್ಲಿ ಸ್ಯಾಂಡಲ್‍ವುಡ್ ಸ್ಟಾರ್ರ್ಸ್, ಮಾಡೆಲ್‍ಗಳು, ಬಿಸಿನೆಸ್‍ಮನ್‍ಗಳು ಇದ್ರಂತೆ. ಆದರೆ ಮಾರ್ಗ ಮಧ್ಯದಲ್ಲಿ ಅಪಘಾತವಾಗಿದ್ರಿಂದ ರೇವ್ ಪಾರ್ಟಿ ಕ್ಯಾನ್ಸಲ್ ಆಗಿತ್ತು ಅನ್ನೋ ಮಾಹಿತಿ ತಿಳಿದು ಬಂದಿದೆ.
ಲವ್ಲಿ ಸ್ಟಾರ್ ಪ್ರೇಮ್ ಸ್ಪಷ್ಟನೆ:
ಸ್ಯಾಂಡಲ್‍ವುಡ್ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಮೇಲಿನ ಆರೋಪ ಸುಳ್ಳು. ಅಪಘಾತ ನಡೆದ ಸಂದರ್ಭದಲ್ಲಿ ಪ್ರಜ್ವಲ್ ಶೂಟಿಂಗ್‍ನಲ್ಲಿದ್ದರು. ದಿಗಂತ್ ಕೂಡ ಕನಕಪುರದಲ್ಲಿ ಶೂಟಿಂಗ್‍ನಲ್ಲಿ ಇದ್ದರು ಅಂತ ಪ್ರೇಮ್ ಹೇಳಿದ್ದಾರೆ. ನಟ ಪ್ರಜ್ವಲ್ ಕೂಡ ನಾನು ಶೂಟಿಂಗ್‍ನಲ್ಲಿದ್ದೆ ಎಂದು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇದೇ ವೇಳೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದು, ಪ್ರಜ್ವಲ್ ದೇವರಾಜ್ ಗೋವಾದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾನೆ. ದಿಗಂತ್ ಮೈಸೂರಿನಲ್ಲಿದ್ದು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಕಿಡಿಕಾರಿದ್ದಾರೆ.