ಬೆಂಗಳೂರು: ಆಟೋ ಚಾಲಕನಿಗೆ ಸಹಾಯ ಮಾಡಿದ ಪೊಲೀಸ್ ಪೇದೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಬೆಂಗಳೂರು ನಗರದ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಪೇದೆಯೊಬ್ಬರು ಆಟೋ ಚಾಲಕನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ, ಫೋಟೋ, ಸ್ಟೋರಿ, ಹ್ಯಾಪಿ ಎಂಡಿಂಗ್ ಎಂದು ಬರೆಯಲಾಗಿದೆ.
Advertisement
Our Singham???? #proudkannadiga
— Umar Farooq (@umarfarooq963) December 4, 2019
Advertisement
ಟ್ವೀಟ್‍ನಲ್ಲಿ ಆಟೋಗೆ ಅಥವಾ ಚಾಲಕನಿಗೆ ಏನಾಗಿತ್ತು ಎಂದು ಉಲ್ಲೇಖಿಸಿಲ್ಲ. ಆದರೆ ಆಟೋ ಕೆಟ್ಟು ನಿಂತಿದ್ದರಿಂದ ಪೇದೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಟ್ವೀಟ್ ಅನ್ನು ನೆಟ್ಟಿಗರು ರಿಟ್ವೀಟ್ ಮಾಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಕೆಲ ನೆಟ್ಟಿಗರು ನಮ್ಮ ಸಿಂಗಂ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ರಿಟ್ವೀಟ್ ಮಾಡಿ, ಪೊಲೀಸರು ಶವವನ್ನು ಹೊರುವುದರಿಂದ ಹಿಡಿದು ಆಟೋವನ್ನು ತಳ್ಳುವವರೆಗೂ ಎಲ್ಲ ಕೆಲಸವನ್ನೂ ಮಾಡುತ್ತಾರೆ. ಎಲ್ಲದಕ್ಕೂ ಅವರು ಸಿದ್ಧವಾಗಿರುತ್ತಾರೆ ಎಂದು ತಿಳಿಸಿದ್ದಾರೆ.
Advertisement
From carrying dead body to pulling auto … Policemen r Always ready … Thank you.
— Bhaskar Rao (@Nimmabhaskar22) December 4, 2019
ಕೆಲ ದಿನಗಳ ಹಿಂದೆಯಷ್ಟೇ ಮಳೆಯಿಂದಾಗಿ ಕೆಲ ಕಡೆ ರಸ್ತೆಯ ಮೇಲೆ ನೀರು ನಿಂತು ಸವಾರರು ಪರದಾಡುವಂತಾಗಿತ್ತು. ಬಿನ್ನಿಮಿಲ್ ರಸ್ತೆಯ ಮೇಲೆ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಂದರಿಂದಾಗಿ ಚಿಕ್ಕಪೇಟೆ ಠಾಣೆಯ ಮೂರು ಜನ ಟ್ರಾಫಿಕ್ ಪೊಲೀಸರು ಸಲಿಕೆ ಹಿಡಿದು, ಗುಂಡಿಗಳನ್ನು ಮುಚ್ಚಿ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚರಂಡಿಗೆ ಹರಿಸಿದ್ದರು. ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.