ಬೆಂಗಳೂರು: ಕರ್ನಾಟಕದಲ್ಲಿ ಕ್ರಿಮಿನಲ್ ಆಕ್ಟಿವಿಟಿ ಪತ್ತೆ ಹಚ್ಚುವುದಕ್ಕೆ ರಾಜ್ಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಲೇ ಇವೆ. ಈ ಕ್ರೈಂಗಳನ್ನು ನಿಯಂತ್ರಿಸುವುಕ್ಕೆ ಪಕ್ಕಾ ಲೋಕಲ್ ನಾಯಿಗಳು ಅಂದ್ರೆ ಬೀದಿ ನಾಯಿಗಳು ಫೀಲ್ಡ್‌ಗೆ ಎಂಟ್ರಿ ಕೊಡುತ್ತಿವೆ.
ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ನಗರದ 50 ಬೀದಿ ನಾಯಿಗಳನ್ನ ತೆಗೆದುಕೊಂಡು ಅವುಗಳಿಗೆ ಪೊಲೀಸ್ ಟ್ರೈನಿಂಗ್ ನೀಡುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಸೌಥ್ ಡಿಸಿಪಿ ರೋಹಿಣಿ ಕಟೋಚ್ ಸಫೇಟ್ ಮಾತನಾಡಿ, ಬೀದಿ ನಾಯಿಗಳಿಗೆ ಕಮಾಂಡೋ ಟ್ರೈನಿಂಗ್ ಪತ್ತೆದಾರಿ ಚಟುವಟಿಕೆ ನೀಡಲಾಗುತ್ತದೆ. ಮುಂದೆ ಅವುಗಳನ್ನು ಖಡಕ್ ಆಫೀಸರ್ ರೀತಿ ರೆಡಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ನಾಯಿಗಳನ್ನು ಮುಂದೆ ಚೆನ್ನಾಗಿ ಟ್ರೈನಿಂಗ್ ಕೊಟ್ಟು, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳಕ್ಕೂ ಬಳಸಬಹುದು. ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ಜಯನಗರ, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಸೇರಿದಂತೆ 17 ಪೊಲೀಸ್ ಠಾಣೆಗಳಲ್ಲಿ ಸುಮಾರು 50ರಿಂದ 60 ನಾಯಿಗಳನ್ನು ಸಾಕಲಾಗುತ್ತಿದೆ. ಇವು ಆಯಾಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿವೆ ಎಂದು ರೋಹಿಣಿ ಕಟೋಚ್ ಸಫೇಟ್ ಮಾಹಿತಿ ನೀಡಿದರು.
Advertisement
ಈ ಮುದ್ದು ಮರಿಗಳಿಗೆ ದಿನವೂ ವ್ಯಾಕ್ಸಿಂಗ್, ಕ್ಲಿನಿಂಗ್, ವಾಕಿಂಗ್, ಜಾಗಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಟ್ರೈನಿಂಗ್ ನೀಡಲಾಗುತ್ತಿದೆ. ವಿವಿಧ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ನಾಯಿ ಮರಿಗಳಿಗೆ ತರಬೇತಿ ನೀಡಲು ಆರಂಭಿಸಿದ್ದಾರೆ. ಈಗಾಗಲೇ ಸಿಟ್, ಸ್ಟ್ಯಾಂಡ್, ಜಂಪ್, ಸ್ಟೇ ಎನ್ನುವ ಆದೇಶವನ್ನು ಪಾಲಿಸುವಂತೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಟ್ರೈನಿಂಗ್ ನೀಡಲಾಗುವುದು ಎಂದು ಹೇಳಿದರು.