ಬೆಂಗಳೂರು: ಹೊಸ ವರ್ಷವನ್ನು ಎಲ್ಲರು ತಮಗೆ ತೋಚಿದಂತೆ ಆಚರಿಸುತ್ತಾರೆ. ಮತ್ತೆ ಕೆಲವರು ಬೇರೆಯವರಿಗಿಂತ ಭಿನ್ನವಾಗಿರಬೇಕು, ವರ್ಷಪೂರ್ತಿ ಈ ಸುಂದರ ಘಳಿಗೆ ನೆನಪಿನಲ್ಲಿ ಉಳಿಯಬೇಕೆಂದು ಪ್ಲಾನ್ ಮಾಡುತ್ತಾರೆ. ಅದೇ ರೀತಿ ಸಿ.ಕೆ.ಅಚ್ಚುಕಟ್ಟು ಠಾಣೆಯ ಪೊಲೀಸರು ಚಿನ್ನ ಕಳೆದುಕೊಂಡವರಿಗೆ ಸ್ಪೆಷಲ್ ಶುಭಾಶಯ ತಿಳಿಸಿದ್ದಾರೆ.
ಇತ್ತೀಚೆಗೆ ನಗರದ ಹಲವು ಭಾಗಗಳಲ್ಲಿ ಸರಗಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಸಂಬಂಧ ಚಿನ್ನ ಕಳೆದುಕೊಂಡವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರಗಳ್ಳತನ ಮತ್ತು ಮನೆ ಕಳವು ಪ್ರಕರಣ ಪತ್ತೆ ಹಚ್ಚಿದ ಪೊಲೀಸರು ಹೊಸ ವರ್ಷದಂದು ವಾರಸುದಾರರ ಮನೆಗೆ ತೆರಳಿ ಚಿನ್ನವನ್ನು ಹಸ್ತಾಂತರಿಸುವ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
Advertisement
Advertisement
ಚಿನ್ನವನ್ನು ಹಿಂದಿರುಗಿಸಿದ ಬಳಿಕ ಪೊಲೀಸರ ಮೊಗದಲ್ಲಿ ಕರ್ತವ್ಯ ನಿರ್ವಹಿಸಿದ ಮಂದಹಾಸ ಮೂಡಿದ್ರೆ, ಚಿನ್ನ ಪಡೆದುಕೊಂಡವರ ಮುಖದಲ್ಲಿ ಒಂದು ರೀತಿಯ ಖುಷಿಯ ಜೊತೆಗೆ ಶಾಕ್ ಕಾಣುತ್ತಿತ್ತು. ಇತ್ತ ಮಲ್ಲೇಶ್ವರಂ ಪೊಲೀಸರು ಸಹ ಬೈಕ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಇದೇ ರೀತಿ ಚಂದ್ರಾಲೇಔಟ್ ಪೊಲೀಸರು ಜನರಿಗೆ ಶುಭ ಕೋರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv