– ದೆಹಲಿ ಸ್ಫೋಟ ಪ್ರಕರಣವೇ ಎಚ್ಚರಿಕೆ ಗಂಟೆ
ಬೆಂಗಳೂರು: ದೆಹಲಿಯಲ್ಲಿ ಕೆಂಪು ಕೋಟೆ (Delhi Red Fort) ಬಳಿ ನಡೆದ ಕಾರು ಬಾಂಬ್ ಸ್ಫೋಟ ಬೆಂಗಳೂರು ಪೊಲೀಸರಿಗೆ ಎಚ್ಚರಿಕೆ ಗಂಟೆಯಾಗಿದೆ. ಹಾಗಾಗಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರು ಪೂರ್ವ ತಯಾರಿ ನಡೆಸುತ್ತಿದ್ದಾರೆ.
ಹೊಸ ವರ್ಷದ (New Year 2026) ಸಂಭ್ರಮಾಚರಣೆ ವೇಳೆ ಜನಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ – 23 ಪ್ರವಾಸಿಗರು ಸಜೀವ ದಹನ; ಸಿಲಿಂಡರ್ ಸ್ಫೋಟ ಶಂಕೆ
ಜನಸಂದಣಿ ಇರುವ ಸ್ಥಳಗಳಲ್ಲಿ (Crowded place) ಅನುಮಾನಾಸ್ಪದ ವಸ್ತು ಕಂಡು ಬಂದ್ರೆ ಅದನ್ನ ಹೇಗೆ ಕನ್ಫರ್ಮ್ ಮಾಡಿಕೊಳ್ಳಬೇಕು? ಒಂದು ವೇಳೆ ಅದು ಸ್ಫೋಟದ ವಸ್ತುವಾಗಿದ್ದರೆ, ಜನರಿಗೆ ಪ್ಯಾನಿಕ್ ಉಂಡುಮಾಡದೇ ಕ್ರೌಡ್ ಕ್ಲೀಯರ್ ಹೇಗೆ ಮಾಡಬೇಕು? ಬಳಿಕ ಅಲ್ಲಿಂದ ಅನುಮಾಸ್ಪದ ವಸ್ತುಗಳನ್ನ ಬೇರೆ ಕಡೆ ಹೇಗೆ ಸಾಗಿಸಿ ಡಿಸ್ಪೋಸ್ ಮಾಡಬೇಕು? ಎಂದೆಲ್ಲ ಸಿಬ್ಬಂದಿಗೆ ಪೂರ್ವ ತಯಾರಿಯನ್ನ ನೀಡಲಾಗುತ್ತಿದೆ. ಇದನ್ನೂ ಓದಿ: ಇಂಡಿಗೋ ಅಡಚಣೆ – ಪ್ರಯಾಣಿಕರ ಪರದಾಟ ತಪ್ಪಿಸಲು 89 ವಿಶೇಷ ರೈಲು ನಿಯೋಜನೆ
ಸಿಬ್ಬಂದಿ ಘಟನಾ ಸ್ಥಳದಲ್ಲಿ ಜನರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಅಪಾಯ ತಪ್ಪಿಸಿ ಜನರನ್ನ ಅಲ್ಲಿಂದ ಹೇಗೆ ಸುರಕ್ಷಿತವಾಗಿ ಕಳಿಸಬೇಕು ಅನ್ನೋ ನಿಟ್ಟಿನಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆ. ಇದನ್ನೂ ಓದಿ: ದೇಶಾದ್ಯಂತ 6ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಸಮಸ್ಯೆ – ಬೆಂಗಳೂರಲ್ಲಿ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು



