ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ಕಾಮಣ್ಣರ ಕಾಟ ಹೆಚ್ಚಾಗುತ್ತಲೇ ಇದೆ. ಬೀದಿ ಕಾಮಾಣ್ಣರ ಕಾಟಕ್ಕೆ ಬ್ರೇಕ್ ಹಾಕೋದಕ್ಕೆ ಮತ್ತು ಮಹಿಳೆಯರೇ ಬೀದಿ ಬದಿಯ ಕಾಮಣ್ಣರ ಬಗ್ಗೆ ಮಾಹಿತಿ ನೀಡಿ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲಿಕ್ಕೆ ಪೊಲೀಸರು ವಿನೂತನ ಪ್ರಯತ್ನ ಮಾಡಿದ್ದಾರೆ.
ಗೋಡೆ ಬರಹಗಳ ಮೂಲಕ ಸಾರ್ವಜನಿಕರಿಗೆ ಲೈಂಗಿಕ ದೌರ್ಜನ್ಯ ತಡೆ ಬಗ್ಗೆ ಅರಿವು ಮೂಡಿಸುತ್ತಾ ಇದ್ದಾರೆ. ಪಾದಾಚಾರಿ ರಸ್ತೆಯ ಗೋಡೆಗಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಬರಹಗಳನ್ನ ಹಾಕಿರುವ ಪೊಲೀಸರು, ಲೈಂಗಿಕ ದೌರ್ಜನ್ಯ ತಡೆಯುವಿಕೆ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಗೋಡೆ ಬರಹಗಳಲ್ಲಿ ಅವಕಾಶ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ವಿನೂತನ ಪ್ರಯತ್ನ ಮಾಡಿದ್ದು ಯಾವ ರೀತಿಯ ಅರಿವು ಮೂಡಿಸುತ್ತೆ. ಈ ಮೂಲಕ ಬೀದಿ ಕಾಮಣ್ಣರು ಹೆದರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.