ಬೆಂಗಳೂರು: ನಗರದ ಕೋರಮಂಗಲ ರಸ್ತೆಯಲ್ಲಿ ಓಡಾಡಲು ಹೆಣ್ಣು ಮಕ್ಕಳು ಭಯಪಡುತ್ತಿದ್ದರು. ಅಲ್ಲಿ ಹೋದರೆ ಏನ್ ಆಗಿಬಿಡುತ್ತೋ ಎನ್ನುವ ಭಯದಲ್ಲೇ ಮಹಿಳೆಯರು ಇದ್ದರು. ಆದರೆ ಇದಕ್ಕೆ ಪೊಲೀಸ್ ಇಲಾಖೆ ಫುಲ್ ಸ್ಟಾಪ್ ಇಡಲು ಮುಂದಾಗಿದೆ.
ಕೋರಮಂಗಲ ಲೇಡಿಸ್ ಹಾಟ್ ಫೇವರೇಟ್ ಎನ್ನುವುದು ಎಷ್ಟು ನಿಜವೋ ಅಲ್ಲಿನ ಹಲವು ಜಾಗಗಳು ಮಹಿಳೆಯರಿಗೆ ಡೇಂಜರ್ ಎನ್ನುವುದನ್ನು ಪೊಲೀಸರೇ ಗುರುತಿಸಿದ್ದಾರೆ. ಆ ಜಾಗಗಳಲ್ಲಿ ಕತ್ತಲಾಗುತ್ತಲೇ ಮಹಿಳೆಯರು ಓಡಾಡಲು ನಡುಗುತ್ತಿದ್ದರು. ಒಂದು ಕಡೆ ಪೋಲಿ ಪುಂಡರ ಕಾಟ, ಇನ್ನೊಂದು ಕಡೆ ಸರಗಳ್ಳತನದ ಭಯ. ಇದರಿಂದ ಮಹಿಳೆಯರು ಮನೆಯಿಂದ ಹೊರಬರಲು ಆಗದೇ ನರಕಯಾತನೆ ಅನುಭವಿಸುತ್ತಿದ್ದರು.
Advertisement
Advertisement
ಕೋರಮಂಗಲ ಇದು ಬೆಂಗಳೂರಿನ ಆಗ್ನೇಯ ಪೊಲೀಸ್ ಲಿಮಿಟ್ಸ್ ಏರಿಯಾ. ನಗರದ ಪಾಶ್ ಏರಿಯಾ ಎನ್ನುವುದು ಒಂದು ಕಡೆಯಾದರೆ ಸರಗಳ್ಳತನ ಸೇರಿ ಮಹಿಳಾ ಪೀಡಕರ ಸಂಖ್ಯೆ ಸಹ ಹೆಚ್ಚು. ಇದಕ್ಕೆ ಶಾಶ್ವತ ಕಡಿವಾಣ ಹಾಕೋದಕ್ಕೆ ಡಿಸಿಪಿ ಇಶಾ ಪಂತ್ ಒಂದು ಪಡೆಯನ್ನು ಸಿದ್ಧ ಮಾಡಿದ್ದಾರೆ. ಅದು ಮಹಿಳೆಯರಿಗಾಗಿ ಮಹಿಳಾ ಪೊಲೀಸರಿಂದಲೇ ಶೌರ್ಯ ವಾಹಿನಿ ಎನ್ನುವ ಪಡೆ ಗಸ್ತು ಆರಂಭಿಸಿದೆ.
Advertisement
Advertisement
ಮಹಿಳೆಯರನ್ನು ಚುಡಾಯಿಸೋ ರಸ್ತೆಯಲ್ಲಿ, ಕತ್ತಲಾಗುತ್ತಲೇ ಓಡಾಡಲು ಆಗದ ಹಾಗೂ ಹೆಚ್ಚು ಮಹಿಳೆಯರು ಸೇರುವ ಕೋರಮಂಗಲದ 8 ಕಡೆಯಲ್ಲಿ ‘ಬನ್ನಿ ಸಾರ್ವಜನಿಕ ಸುರಕ್ಷತಾ ಸ್ಥಳ ನಿರ್ಮಿಸೋಣ’ ಎನ್ನುವ ಅಭಿಯಾನದ ಮೂಲಕ ಮಹಿಳೆಯರು ಸ್ವತಃ ಅವರೇ ಹೇಗೆ ಪೋಲಿ ಪುಂಡರ ಇರೋ ಕಡೆ ತಮ್ಮನ್ನ ತಾವು ಡಿಫೈನ್ ಮಾಡಿಕೊಳ್ಳಬೇಕು ಎನ್ನುವುದನ್ನು ಪೊಲೀಸರು ಟ್ರೈನಿಂಗ್ ಕೊಡುತ್ತಿದ್ದಾರೆ. ಈ ಅಭಿಯಾನದ ಬಗ್ಗೆ ಸ್ಥಳೀಯ ಮಹಿಳೆಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಎಂದರೆ ಸ್ವತಃ ನಮಗೆ ಒಂದು ರೀತಿಯ ಭಯ ಇತ್ತು. ಈಗ ಒಂದು ಬಾಂಧವ್ಯ ಶುರುವಾಗಿದೆ ಎಂದರು.
ಈ ಅಭಿಯಾನದ ರೂವಾರಿ ಡಿಸಿಪಿ ಇಶಾ ಪಂತ್ ಪ್ರತಿದಿನವೂ ಎಲ್ಲಾ 8 ಸ್ಥಳಗಳಿಗೂ ಭೇಟಿ ನೀಡಿ ಮಹಿಳೆಯರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿದ್ದಾರೆ. ಕೋರಮಂಗಲ ಪೊಲೀಸ್ ಇನ್ಸ್ ಪೆಕ್ಟರ್ ಈಶ್ವರಿ ಸುರೇಶ್ ಮಹಿಳೆಯರಿಗೆ, ಪೊಲೀಸರಿಗೆ ತಮ್ಮ ಮೇಲೆ ಆದಂತ ದೌರ್ಜನ್ಯವನ್ನು ಹೇಗೆ ತಲುಪಿಸಬೇಕು. ತಿಂದರೆಗೆ ಒಳಗಾದಾಗ ಏನು ಮಾಡಬೇಕು ಎನ್ನುವುದನ್ನು ತಿಳಿಸಿದರು. ಇನ್ನು ಈ ಅಭಿಯಾನದಲ್ಲಿ ಪುಟಾಣಿಗಳು ಸಹಭಾಗಿಯಾಗಿದ್ದು ಅವರಿಗೆ ಪೊಲೀಸರ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿದೆ. 8 ಜಾಗಗಳಲ್ಲಿ ಮಹಿಳೆಯರನ್ನ ಪೋಲಿಗಳ ಹೆಡೆಮುರಿ ಕಟ್ಟಲು ಪೊಲೀಸರು ಸಜ್ಜು ಮಾಡುತ್ತಿದ್ದಾರೆ.