Connect with us

Bengaluru City

ಇಡೀ ಸಿಲಿಕಾನ್ ಸಿಟಿಗೆ ಗಾಂಜಾ ಹಂಚುತ್ತಿದ್ದವ ಪೊಲೀಸ್ರ ಬಲೆಗೆ

Published

on

ಬೆಂಗಳೂರು: ಎಲ್ಲಿಂದ ಬರುತ್ತಪ್ಪಾ ಬೆಂಗಳೂರಿಗೆ ಗಾಂಜಾ ಎಂದು ತಲೆ ಕೆಡಿಸಿಕೊಂಡಿದ್ದ ಪೊಲೀಸರಿಗೆ ಬಹುದೊಡ್ಡ ಮಿಕ ಸಿಕ್ಕಿದೆ.

ಒಡಿಸ್ಸಾದಿಂದ ಗಾಂಜಾ ತಂದು ಸಿಲಿಕಾನ್ ಸಿಟಿಯಲ್ಲಿ ಲೋಕಲ್ ಪೆಡ್ಲರ್‍ಗಳಿಗೆ ಮಾರಾಟ ಮಾಡುತ್ತಿದ್ದ ಕಿರದ್ ಮಿಶಾಲ್ ಎಂಬಾತನನ್ನ ಮಾರತ್‍ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಒಡಿಶಾದಿಂದ ಟ್ರೈನ್ ಮುಖಾಂತರ ಲಗ್ಗೇಜ್ ತರೊ ಹಾಗೆ ಗಾಂಜಾ ತರ್ತಿದ್ದ ಆರೋಪಿ, ನಗರದ ಐಟಿ ಬಿಟಿ ಕಂಪನಿಗಳು, ಕಾಲೇಜ್‍ಗಳು, ಲಾಡ್ಜ್‍ಗಳ ಬಳಿ ಲೋಕಲ್ ಪೆಡ್ಲರ್ ಗಳಿಗೆ ಮಾರಾಟ ಮಾಡುತ್ತಿದ್ದ.

ಲೋಕಲ್ ಪೆಡ್ಲರ್‍ಗಳು ಗಾಂಜಾ ವ್ಯಸನಿಗಳಿಗೆ ಮಾರಾಟ ಮಾಡೊ ಕೆಲಸ ಮಾಡುತ್ತಿದ್ದರು. ಕೆಲ ಲೋಕಲ್ ಪೆಡ್ಲರ್ ಗಳನ್ನು ಬಂಧನ ಮಾಡಿದ್ರು ಸಹ ಮೈನ್ ಡೀಲರ್ ಅರೆಸ್ಟ್ ಆಗಿರಲಿಲ್ಲ. ಕಿರದ್ ಮಿಶಾಲ್ ಬಂಧನದಿಂದ ಸದ್ಯ ಐದು ಲಕ್ಷ ಮೌಲ್ಯದ 15 ಕೆಜಿ ಗಾಂಜಾ ಪತ್ತೆಯಾಗಿದೆ. ಇನ್ಮುಂದೆಯಾದ್ರು ಗಾಂಜಾ ಹಾವಳಿ ತಪ್ಪುತ್ತಾ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *