ದರೋಡೆಕೋರರಿಬ್ಬರ ಕಾಲು ಸೀಳಿದ ಪೊಲೀಸ್ ಬುಲೆಟ್!

Public TV
1 Min Read
BNG KR puram police jayaraj 1

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದ್ದು, ಈ ಬಾರಿ ಕಾಡುಗೋಡಿ ಠಾಣೆ ವ್ಯಾಪ್ತಿಯ ಕಾಗೆ ಸೊಣ್ಣೇನಹಳ್ಳಿಯಲ್ಲಿ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ್ದಾರೆ.

ಅಪ್ಪು ಅಲಿಯಾಸ್ ನವೀನ್, ಗಿರಿ ಅಲಿಯಾಸ್ ಗಿರೀಶ್ ಗುಂಡೇಟು ತಿಂದ ಆರೋಪಿಗಳು. ಕೆಆರ್ ಪುರಂ ಇನ್ಸ್ ಪೆಕ್ಟರ್ ಜಯರಾಜ್ ಅವರ ಗುಂಡಿಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಗಳನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

BNG KR puram police jayaraj

ಏನಿದು ಪ್ರಕರಣ?:
ನವೀನ್, ಗಿರೀಶ್ ಸೇರಿದಂತೆ ಅವರ ತಂಡವು ಮಧ್ಯರಾತ್ರಿ ಒಂಟಿಯಾಗಿ ಬರುವ ಚಾಲಕರು ಹಾಗೂ ಸವಾರರನ್ನು ಬೆದರಿಸಿ ಅವರಿಂದ ಹಣ, ಚಿನ್ನಾಭರಣ ಕಿತ್ತುಕೊಳ್ಳುತ್ತಿದ್ದರು. ಹೀಗಾಗಿ ಆರೋಪಿಗಳಿಗೆ ಬಲೆ ಬೀಸಿದ್ದ ಕೆಆರ್ ಪುರಂ ಇನ್ಸ್ ಪೆಕ್ಟರ್ ಜಯರಾಜ್ ಅವರ ನೇತೃತ್ವದ ತಂಡ ಕೃತ್ಯ ಎಸಗುತ್ತಿದ್ದ ಸ್ಥಳಕ್ಕೆ ಬಂದಿದೆ. ಇದನ್ನು ನೋಡಿದ ದರೋಡೆಕೋರರು ಪೊಲೀಸ್ ಜೀಪ್‍ಗೆ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆಯೇ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಲ್ಲು ತಾಗಿ ಪೇದೆ ಮುನಿರಾಜು ಎಂಬವವರಿಗೆ ಗಾಯವಾಗಿತ್ತು.

ದರೋಡೆಕೋರರ ಬಂಧನಕ್ಕೆ ಮುಂದಾದ ಜಯರಾಜ್ ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಬಲಗಾಲಿಗೆ ತಾಗಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರು ತೀರ್ಪುರ ಶ್ರೀನಿವಾಸ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾರೆ. ತಕ್ಷಣವೇ ಅವರನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿವೆ.

BNG police firing 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article