ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಗುಂಡು ಸದ್ದು ಮಾಡಿದ್ದು, ಈ ಬಾರಿ 12 ಪ್ರಕರಣದಲ್ಲಿ ಬೇಕಾಗಿದ್ದ ವಾಂಟೆಡ್ ಆರೋಪಿಯೊಬ್ಬನ ಕಾಲ ಸೀಳಿದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ದಿನೇಶ್ ದೋರಾ ಗುಂಡೇಟು ತಿಂದ ಆರೋಪಿ. ದಿನೇಶ್ ಬಲಗಾಲಿಗೆ ಗುಂಡು ಸೇರಿದ್ದು, ಆತನನ್ನು ಬಂಧಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ದಿನೇಶ್ ವಿರುದ್ಧ ಇಂದಿರಾನಗರ, ಡಿಜೆ ಹಳ್ಳಿ, ಹೆಣ್ಣೂರು, ಜೆಸಿ ನಗರ, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಪ್ರಕರಣಗಳಿದ್ದು ದಾಖಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.
Advertisement
ಇತನ ವಿರುದ್ಧ ಕಳ್ಳತನಕ್ಕೆ ಯತ್ನಿಸುತಿದ್ದ ಆರೋಪಿ ಕೂಡ ದಾಖಲಾಗಿತ್ತು. ಪ್ರಕರಣ ತನಿಖೆ ಆರಂಭಿಸಿದ್ದ ಬಾಣಸವಾಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರೂಪಾಕ್ಷ ತಂಡ ರಚಿಸಿ, ದಿನೇಶ್ ಬಂಧನಕ್ಕೆ ಪ್ಲಾನ್ ಮಾಡಿದ್ದರು. ಖಚಿತ ಮಾಹಿತಿ ಪಡೆದಿದ್ದ ಇನ್ಸ್ ಪೆಕ್ಟರ್ ವಿರೂಪಾಕ್ಷ ನೇತೃತ್ವದ ತಂಡವು ಬಾಣಸವಾಡಿ ವ್ಯಾಪ್ತಿಯಲ್ಲಿ ದಿನೇಶ್‍ನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಈತ ಪೇದೆ ಮೂರ್ತಿ ಎಂಬವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ.
Advertisement
ದಿನೇಶ್ ಪರಾರಿಯಾಗುತ್ತಿರುವುದನ್ನು ನೋಡಿದ ವಿರೂಪಾಕ್ಷ ಅವರು ಗುಂಡು ಹಾರಿಸಿದ್ದಾರೆ. ಪರಿಣಾಮ ದಿನೇಶ್ ಬಲಗಾಲಿಗೆ ಗುಂಡು ಹೊಕ್ಕಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಬಂಧಿಸಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews