ಬೆಂಗಳೂರು: ಪೊಲೀಸರು ಅಂದರೆ ಸಾಮಾನ್ಯವಾಗಿ ಸದಾ ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಬೇರೆ ಯಾವುದೇ ಕೆಲಸ ಮಾಡುವುದಕ್ಕೆ ಟೈಂ ಕೂಡ ಇರಲ್ಲ ಎನ್ನುವುದು ವಾಡಿಕೆ. ಆದರೆ ಇಲ್ಲೊಬ್ಬ ಪೇದೆ ತನ್ನ ಹಾಡು, ಸಾಹಿತ್ಯದ ಮೂಲಕವೇ ಫೇಮಸ್ ಆಗಿದ್ದು, ಅಲ್ಲದೇ ಖಾಸಗಿ ವಾಹಿನಿಯ ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ವಿ. ಸುಬ್ರಮಣಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಬ್ರಮಣಿ ಇಲಾಖೆ ಮಟ್ಟದ ಕಾರ್ಯಕ್ರಮಗಳು, ಜನಸ್ನೇಹಿ ಪೊಲೀಸ್ ಕಾರ್ಯಕ್ರಮಗಳಲ್ಲಿ ಹಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಯಾವಾಗ ಪೇದೆ ಸುಬ್ರಮಣಿ ಇಷ್ಟೊಂದು ಮಧುರವಾಗಿ ಹಾಡುವುದಕ್ಕೆ ಶುರು ಮಾಡಿದರೋ, ಜೊತೆಯಲ್ಲಿದ್ದ ಸಹ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ಸುಬ್ರಮಣಿ ಗಾಯನಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು. ಪರಿಣಾಮ ತೆಲಗು ಭಾಷೆಯ ಪ್ರತಿಷ್ಠಿತ ಖಾಸಗಿ ವಾಹಿನಿ ಸೂಪರ್ ಸಿಂಗರ್ ಕಾರ್ಯಕ್ರಮದ ಹತ್ತಿರ ಬಳಗದಲ್ಲಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದ್ಯ ಸೂಪರ್ ಸಿಂಗರ್ ಕಾರ್ಯಕ್ರಮ ಈಗಷ್ಟೇ ಪ್ರಾರಂಭವಾಗಿದ್ದು, ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಆಯ್ಕೆಯಾದ ನಮ್ಮ ಪೊಲೀಸ್ ಕಾನ್ಸ್‍ಟೇಬಲ್‍ಗೆ ಸುಬ್ರಮಣಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.