ಬೆಂಗಳೂರು: ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಸುತ್ತಾರೆ ಎಂಬುವುದು ಮಾತ್ರ ಇರುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕಳೆದ 8 ದಿನಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 2.40 ಕೋಟಿ ಹಣ ದಂಡದ ರೂಪದಲ್ಲಿ ವಸೂಲಾಗಿದೆ.
ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಅಡಿ ಹೊಸ ನಿಯಮಗಳು ಅನ್ವಯವಾದ ಬಳಿಕ ಇದುವರೆಗೂ 84,589 ಪ್ರಕರಣಗಳು ದಾಖಲಾಗಿವೆ. ವಿಶೇಷ ಎಂದರೆ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಕೇವಲ 150 ಪ್ರಕರಣಗಳು ಮಾತ್ರ ಇದುವರೆಗೂ ದಾಖಲಾಗಿವೆ. ಇದನ್ನೂ ಓದಿ: ಮದ್ಯ ಸೇವಿಸಿ ಕಾರು ಓಡಿಸಿ ಆಟೋಗೆ ಡಿಕ್ಕಿ ಹೊಡೆದ ಆರ್‌ಟಿಓ ಇನ್ಸ್‌ಪೆಕ್ಟರ್
Advertisement
Advertisement
ಕಳೆದ 8 ದಿನಗಳ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದ 16,710 ಪ್ರಕರಣ, ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಸಂಬಂಧ 10,977 ಪ್ರಕರಣಗಳು, ಸಿಗ್ನಲ್ ಜಂಪ್ 10,128 ಪ್ರಕರಣ, ನೋ ಪಾರ್ಕಿಂಗ್ 10,867 ಪ್ರಕರಣ, ಡ್ರಿಂಕ್ ಅಂಡ್ ಡ್ರೈವ್ ಅಡಿ 150 ಪ್ರಕರಣಗಳು ದಾಖಲಾಗಿದೆ. ಒಟ್ಟು 60 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ಅಡಿ ದಂಡವನ್ನು ವಿಧಿಸಲಾಗುತ್ತಿದೆ. ದಿನವೊಂದಕ್ಕೆ ಸರಾಸರಿ 29 ಲಕ್ಷ ರೂ. ದಂಡದ ಹಣ ಸಂಗ್ರಹವಾಗುತ್ತಿದೆ. ಹೀಗೆ ಮುಂದುವರೆದರೆ ಟ್ರಾಫಿಕ್ ಪೊಲೀಸರ ಕಡೆಯಿಂದ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 8 ಕೋಟಿ ಆದಾಯ ಲಭಿಸಲಿದೆ. ಸೆ.12 ಬೆಳಗ್ಗೆ 10 ಗಂಟೆಯಿಂದ ಸೆ.13 ಬೆಳಗ್ಗೆ 10 ಅವಧಿಯಲ್ಲಿ ನಗರದಲ್ಲಿ 18,503 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಒಟ್ಟು 60,80,500 ರೂ. ದಂಡ ಸಂಗ್ರಹವಾಗಿದೆ. ಇದನ್ನು ಓದಿ: ಕರ್ನಾಟಕದಲ್ಲಿ ಟ್ರಾಫಿಕ್ ದಂಡದ ಮೊತ್ತ ಇಳಿಯುವುದು ಅನುಮಾನ
Advertisement
Advertisement
ಇತ್ತ ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ನಡುವೆ, ಹಲವು ರಾಜ್ಯಗಳಲ್ಲಿ ದಂಡದ ಪ್ರಮಾಣ ಇಳಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚರ್ಚಿಸಲು ಎಲ್ಲಾ ರಾಜ್ಯಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ. ಈ ಬೆಳವಣಿಯಿಂದ ರಾಜ್ಯದಲ್ಲಿ ಟ್ರಾಫಿಕ್ ದಂಡದ ಇಳಿಕೆ ಮಾಡುತ್ತಾರಾ ಎಂಬ ಅನುಮಾನ ಅನುಮಾನ ಮೂಡಿದೆ. ಇದನ್ನೂ ಓದಿ: ನಾಯಕರ ‘ದಂಡ’ಯಾತ್ರೆ – ಟ್ರಾಫಿಕ್ ನಿಯಮಕ್ಕೆ ಸಿಎಂ ಡೋಂಟ್‍ಕೇರ್