ಬೆಂಗಳೂರು: ನ್ಯೂ ಇಯರ್ ಬರ್ತಿದೆ ಅಂತಾ ಸೆಲೆಬ್ರೇಷನ್ ಮಾಡೋಕೆ ಹೊಟೇಲ್, ರೆಸಾರ್ಟ್, ಪಬ್ ಬುಕ್ ಮಾಡ್ತಿದ್ರೆ, ಆನ್ಲೈನ್ ಬುಕಿಂಗ್ ಮಾಡುವ ಮುನ್ನ ಎಚ್ಚರ ವಹಿಸಲೇಬೇಕಿದೆ. ನ್ಯೂ ಇಯರ್ ಬುಕಿಂಗ್ ಹೆಸರಲ್ಲಿ ವಂಚನೆ ಶುರುವಾಗಿದ್ದು, ಬುಕಿಂಗ್ ಹೆಸರಲ್ಲಿ ಸೈಬರ್ ವಂಚಕರು ಹಣ ದೋಚುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸೈಬರ್ ಚೋರರ ಹೊಸ ಆಟ ಶುರುವಾಗಿದೆ. ನ್ಯೂ ಇಯರ್ ಸೆಲೆಬ್ರೆಷನ್ ಅಂತಾ ನಕಲಿ ಲಿಂಕ್ ವೈರಲ್ ಆಗಿದ್ದು, ಲಿಂಕ್ ನಲ್ಲಿ ಆನ್ಲೈನ್ ನಲ್ಲಿ ಬುಕ್ ಮಾಡ್ಕೊಳ್ಳಿ ಅಂತಾ ಆಫರ್ ಬರ್ತಿದೆ. ನೀವು ಹಣ ಹಾಕಿದ್ರೆ ಅವು ಫೇಕ್ ಈವೆಂಟ್, ಫೇಕ್ ಪಾರ್ಟಿಗಳಾಗಿರುತ್ತೆ.
ಈವೆಂಟ್, ಪಾರ್ಟಿಗಳ ಪಾಸ್ ಕೊಡುವುದಾಗಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಎಗರಿಸ್ತಿದ್ದಾರೆ. ಹಾಗೂ ವೈಯಕ್ತಿಕ ಮಾಹಿತಿಗಳನ್ನ ಅಕ್ರಮವಾಗಿ ಪಡೆದು ವಂಚನೆ ಎಸಗಲಾಗ್ತಿದೆ. ಇಂತಹ ನಕಲಿ ಜಾಲಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಪೊಲೀಸರು ಸೂಚನೆ ನೀಡಿದ್ದು, ಕಂಡ ಕಂಡ ಲಿಂಕ್ ಗಳಲ್ಲಿ ಬುಕಿಂಗ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಅಧಿಕೃತ ವೆಬ್ ಸೈಟ್, ಆನ್ಲೈನ್ ಜಾಲಗಳನ್ನ ಪರಿಶೀಲಿಸಿ ಬುಕ್ ಮಾಡಲು ಸೂಚನೆ ನೀಡಲಾಗಿದೆ. ಅಪರಿಚಿತ ಪೇಮೆಂಟ್ ಲಿಂಕ್, ಕ್ಯೂ ಆರ್ ಕೋಡ್ ಗಳಿಗೆ ಹಣ ಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಪಾರ್ಟಿ, ಈವೆಂಟ್ ಗಳ ಬುಕಿಂಗ್ ವೇಳೆ ಎಚ್ಚರಿಕೆ ವಹಿಸಲು ಪೊಲೀಸರ ಎಚ್ಚರಿಕೆ ನೀಡಿದ್ದಾರೆ.


