ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಬಾಟಲ್‍ಗಳಲ್ಲಿ ಪೆಟ್ರೋಲ್ ನೀಡುವಂತಿಲ್ಲ ಎಂದು ಈಗಾಗಲೇ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶದ ಪಶು ವೈದ್ಯೆಯ ಕೊಲೆ, ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾದರೆ ಕಮಿಷನರ್ ಸೂಚನೆ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎಂದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿದೆ.
ಆಂಧ್ರಪ್ರದೇಶದ ಪಶುವೈದ್ಯೆಯ ಕೊಲೆ, ಅತ್ಯಾಚಾರದ ವೇಳೆ ಆರೋಪಿಗಳು ಪೆಟ್ರೋಲ್ ಬಾಟೆಲ್‍ನಲ್ಲಿ ಖರೀದಿ ದೇಹವನ್ನ ಸುಟ್ಟು ಹಾಕಿದ್ದರು ಎಂದು ಪೊಲೀಸ್ ಮಾಹಿತಿ ಕಲೆಹಾಕಲಾಗಿತು. ಮುನ್ನಚ್ಚೆರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಳೆದ 10 ದಿನಗಳ ಹಿಂದೆಯೇ ಕಡ್ಡಾಯವಾಗಿ ಪೆಟ್ರೋಲ್ ಬಂಕ್‍ಗಳಲ್ಲಿ ಬಾಟಲ್‍ಗಳಲ್ಲಿ ಪೆಟ್ರೋಲ್ ನೀಡಬೇಡಿ ಅಂತ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಇದರ ಪಾಲನೆ ಆಗುತ್ತಲೇ ಇಲ್ಲ.
Advertisement
Advertisement
ಸ್ಥಳ – ಕ್ವೀನ್ಸ್ ರೋಡ್
ಸಮಯ – ಸಂಜೆ 4 ಗಂಟೆ
ದಂಡು ರೈಲ್ವೇ ನಿಲ್ದಾಣದ ಸಮೀಪದಲ್ಲೇ ಅಂದ್ರೆ ಕ್ವೀನ್ಸ್ ರೋಡ್ ಬಳಿ ಇರುವ ಪೆಟ್ರೋಲ್ ಬಂಕ್‍ನಲ್ಲೂ ಯಾಕೆ, ಏನು, ಹೇಗೆ ಅಂತ ಕೇಳಲ್ಲ ಪೆಟ್ರೋಲ್ ಹಾಕಿ ಕಳಿಸುತ್ತಾರೆ. ಪೊಲೀಸ್ ಆಯುಕ್ತರ ಕಚೇರಿಗೆ 1 ಕಿಮೀ ದೂರದಲ್ಲೇ ಕಮೀಷನರ್ ಸೂಚನೆ ಕಿಮ್ಮತ್ತಿಲ್ಲ.
Advertisement
ಪ್ರತಿನಿಧಿ – ಬ್ರೋ ಪೆಟ್ರೋಲ್
ಸಿಬ್ಬಂದಿ – ಕಾಯಿರಿ
ಪ್ರತಿನಿಧಿ – ಅಣ್ಣ ಬರೀ 30 ರೂ. ಪೆಟ್ರೋಲ್ ಹಾಕಣ್ಣ
Advertisement
ಸ್ಥಳ – ಸೆಂಟ್ ಮಾರ್ಕ್ಸ್ ರೋಡ್
ಸಮಯ -2. 30
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕಚೇರಿಗೆ ಕೇವಲ 1.5 ಕಿಮೀ ಅಂತರದಲ್ಲಿರುವ ಸೆಂಟ್ ಮಾರ್ಕ್ಸ್ ರೋಡಿನ ಪೆಟ್ರೋಲ್ ಬಂಕ್‍ನಲ್ಲೂ ಬಾಟಲ್‍ಗೆ ಪೆಟ್ರೋಲ್ ಕೇಳಿದಾಕ್ಷಣ ಕೊಟ್ಟು ಕಳಿಸುತ್ತಾರೆ.
ಸ್ಟಿಂಗ್ ಬೈಟ್ 2
ಪ್ರತಿನಿಧಿ – ಅಣ್ಣ ಕ್ಯಾನ್‍ಗೆ ಪೆಟ್ರೋಲ್ ಬೇಕು
ಸಿಬ್ಬಂದಿ – ಒಂದ್ ನಿಮಿಷ ಕಾದರೆ ಎಷ್ಟು ಬೇಕಾದ್ರೂ ಕೊಡುತ್ತೀನಿ
ಪ್ರತಿನಿಧಿ – ಬೇಗ ಹಾಕಣ್ಣ
ಸಿಬ್ಬಂದಿ – ಏನ್ ಮಾಡೋದು ಹಾಕ್ತೀನಿ ಇರು
ಈ ಮಧ್ಯೆ ಬೆರಳೆಣಿಕೆಯಷ್ಟು ಪೆಟ್ರೋಲ್ ಬಂಕ್‍ಗಳಲ್ಲಿ ಮಾತ್ರ ಲಿಖಿತವಾಗಿಯೇ ಪೆಟ್ರೋಲ್ ಕೊಡಲ್ಲ. ಪೊಲೀಸ್ ಆಯುಕ್ತರು ಬಾಟಲ್‍ನಲ್ಲಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಮೆಜೆಸ್ಟಿಕ್:
ಪ್ರತಿನಿಧಿ – ಅಣ್ಣ ಕ್ಯಾನ್‍ಗೆ ಒಂದ್ ಚುರು ಪೆಟ್ರೋಲ್ ಹಾಕು
ಸಿಬ್ಬಂದಿ – ಇಲ್ಲ ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು
ಪ್ರತಿನಿಧಿ – ಕೊಡಬೇಕಾ
ಸಿಬ್ಬಂದಿ – ಯಾಕೆ ಪೆಟ್ರೋಲ್ ಬೇಕು ಅಂತ ಹೇಳಬೇಕು
ಪ್ರತಿನಿಧಿ – ಯಾವಾಗಿನಿಂದ ಹೀಗೆ
ಸಿಬ್ಬಂದಿ – ಅದೇ ಆಂಧ್ರ ಹುಡುಗಿ ಕೇಸ್ ಆದ ಮೇಲೆ ಹೀಗೆ
ಸ್ಥಳ – ಶೇಷಾದ್ರಿಪುರಂ
ಸಮಯ – ಬೆಳಗ್ಗೆ 12 ಗಂಟೆ
ಶೇಷಾದ್ರಿಪುರಂ ಬಂಕ್ ಅಂತೂ ಕೇವಲ 2.5 ಕಿಮೀ ಅಂತರದಲ್ಲಿ ಕಮೀಷನರ್ ಕಚೇರಿ ಇದೆ. ಆದರೂ ಕಮಿಷನರ್ ಸೂಚನೆಗಳಿಗೆ ಮಣೆ ಹಾಕದೇ ವ್ಯಾಪಾರ ಮಾಡೊದನ್ನೇ ಮುಖ್ಯವಾಗಿಸಿಕೊಂಡು ಬಿಸಿಯಾಗಿ ಇರುತ್ತಾರೆ.
ಸ್ಟಿಂಗ್ ಬೈಟ್ 4
ಪ್ರತಿನಿಧಿ – ಅಣ್ಣ 30 ರೂ ಹಾಕಣ್ಣ
ಸಿಬ್ಬಂದಿ – ಎಷ್ಟಕ್ಕೆ
ಪ್ರತಿನಿಧಿ – 30 ರೂ
ಸಿಬ್ಬಂದಿ – 20 ರೂ ವಾಪಸ್ ತಗೊಳ್ಳಿ
ದಾಖಲೆಗಳ ವಿವರ ಹೀಗಿದೆ: ಆಧಾರ್ ಕಾರ್ಡ್ ಜೆರಾಕ್ಸ್ ನೀಡಬೇಕು. ಮನೆ ವಿಳಾಸ, ವೆಹಿಕಲ್ ನಂಬರ್ ಕೊಡಬೇಕು. ಯಾಕೆ ಪೆಟ್ರೋಲ್, ಎಲ್ಲಿಗೆ ಎಂಬ ಮಾಹಿತಿ ಕೊಡಬೇಕು. ಇದರೊಂದಿಗೆ ಫೋನ್ ನಂಬರ್ ಕೂಡ ಕೊಡಬೇಕು.
ಒಟ್ಟಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಒಂದು ನೆನಪಿನಲ್ಲಿಡಬೇಕು ದುಡ್ಡು ಮಾಡುವುದು ದೊಡ್ಡದಲ್ಲ, ಮುಗ್ಧ ಜೀವ ಬಲಿಯಾಗಲು ನೀವೂ ಪರೋಕ್ಷ ಕಾರಣವಾಗದಿರಿ. ಪೊಲೀಸ್ ಆಯುಕ್ತರು ಸೂಚನೆ ಕೊಟ್ಟು ಸುಮ್ಮನಿದ್ದರೆ ಹೀಗೆ ಆಗುವುದು. ಅವರ ಕಚೇರಿ ಆಸುಪಾಸಿನಲ್ಲೇ ಹೀಗೆ ಕಿಮ್ಮತ್ತು ನೀಡುತ್ತಿಲ್ಲ, ಇನ್ನೂ ನಗರದಲ್ಲಿ ಎಲ್ಲೆಡೆ ಯಾವ ಸ್ಥಿತಿ ನೀವೇ ಲೆಕ್ಕ ಹಾಕಿಕೊಳ್ಳಿ. ಇದನ್ನ ನೋಡಿಯಾದ್ರೂ ಕಮಿಷನರ್ ಏನ್ ಕ್ರಮ ಕೈಗೊಳ್ತಾರೆ ಅಂತ ಕಾದುನೋಡಬೇಕಿದೆ.