ಬೆಂಗಳೂರು: ಮಂಗಳವಾರ ಸುರಿದ ಮಳೆಗೆ ಇಡೀ ಬೆಂಗಳೂರು ತೋಯ್ದು ತೊಪ್ಪೆಯಾಗಿದೆ. ಭಾರಿ ಮಳೆಗೆ ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ ಜನ ಇನ್ನಿಲ್ಲದ ಪಾಡು ಅನುಭವಿಸ್ತಿದ್ದಾರೆ. ಸದ್ಯಕ್ಕೆ ಮಳೆ ನಿಂತರೂ ಜನರ ಸಮಸ್ಯೆಗಳಿಗೆ ತೆರೆ ಬಿದ್ದಿಲ್ಲ.
ರಾತ್ರಿಯ ವೇಳೆಗೆ ನದಿಯಂತೆ ಹರಿಯುತ್ತಿದ್ದ ರಸ್ತೆಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ಹೆಚ್ಎಸ್ಆರ್ ಲೇಔಟ್ನ ಕೆಲ ಮನೆಗಳಲ್ಲಿ ಮಳೆಗೆ ನೆನೆದಿದ್ದ ಗೃಹೋಪಯೋಗಿ ವಸ್ತುಗಳನ್ನು ಹೊರಹಾಕಿ ಮತ್ತೊಮ್ಮೆ ಮಳೆ ಬಂದು ಮನೆಗೆ ನೀರು ನುಗ್ಗದಂತೆ ಸಿಮೆಂಟ್ ಮೂಟೆಗಳನ್ನು ಮನೆಯ ಬಾಗಿಲಿಗೆ ಅಡ್ಡ ಇಟ್ಟು ಮನೆಗಳನ್ನು ಶುಚಿಗೊಳಿಸಿದ್ದಾರೆ.
Advertisement
Advertisement
ಕೋರಮಂಗಲದ ಎಸ್ಟಿ ಬೆಡ್ ಲೇಔಟ್ನಲ್ಲಿ ಅಪಾಟ್ರ್ಮೆಂಟ್ಗಳಿಗೆ ನುಗ್ಗಿದ್ದ ನೀರನ್ನು ಅಗ್ನಿಶಾಮಕದಳದಿಂದ ಹೊರಹಾಕುವ ಕಾರ್ಯ ಭರದಿಂದ ಸಾಗಿದೆ. ಗಬ್ಬುನಾರುತ್ತಿದ್ದ ಚರಂಡಿ ನೀರು ಮನೆ ನುಗ್ಗಿದ್ದರಿಂದ ಇನ್ನಿಲ್ಲದ ಪಾಡು ಅನುಭವಿಸ್ತಿದ್ದಾರೆ.ಕೋರಮಂಗಲದ ಬಿಎಂಟಿಸಿ ಬಸ್ ನಿಲ್ದಾಣದ ಒಳಗೆ ಇನ್ನೂ ನೀರು ಹಾಗೇ ನಿಂತಿದೆ. ರಾತ್ರಿಯಿಡೀ ನೀರನ್ನ ಹೊರತೆಗೆಯೋ ಕೆಲಸ ನಡೆದ್ರೂ ಬಸ್ ನಿಲ್ದಾಣದ ಒಳಗಿನ ನೀರು ಮಾತ್ರ ಕಡಿಮೆಯಾಗಿಲ್ಲ. ಬೆಳಗಾದ್ರೂ ಬಿಎಂಟಿಸಿ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ನೀರನ್ನ ತೆಗೆಯೋ ಕೆಲಸ ಮಾಡ್ತಾನೇ ಇದ್ದಾರೆ.
Advertisement
Advertisement
ಚಂದ್ರಾಲೇಔಟ್ ಭಾಗದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಮಳೆ ಮುಂದುವರಿಯುತ್ತೆ ಅಂತ ಮುನ್ಸೂಚನೆ ನೀಡಿರುವುದರಿಂದ ಬೆಂಗಳೂರಿಗರು ಭಯ ಪಡುವಂತಾಗಿದೆ.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಗದಗದಲ್ಲಿ ಆಶ್ಲೇಷ ಮಳೆಗೆ ಭೂತಾಯಿ ತಣ್ಣಗಾಗಿದ್ದಾಳೆ. ಹವಾಮಾನ ಇಲಾಖೆ ಪ್ರಕಾರ ಗದಗ ಸುತ್ತಮುತ್ತ 12 ಮಿಲಿ ಮೀಟರ್ನಷ್ಟ್ಟು ಮಳೆಯಾಗಿದೆ. ಬೆಳದಡಿ ಗ್ರಾಮದ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಳೆ ಬಂದಿರೋದೇ ಖುಷಿ ಅಂತ ಕೆಲವರು ಮಳೆಯಲ್ಲೇ ನೆನೆದು ಎಂಜಾಯ್ ಮಾಡಿದ್ರು.
ಹಾಸನದ ಹಲವೆಡೆ ಸುರಿದ ತುಂತುರು ಮಳೆಗೆ ಜೋಳ, ರಾಗಿ, ಆಲೂಗಡ್ಡೆಯಂತಹ ಬೆಳೆ ಬೆಳೆದ ರೈತಾಪಿ ವರ್ಗಕ್ಕೆ ನೆಮ್ಮದಿ ತಂದಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಹಾವೇರಿ ಜನ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ರು. ಆದ್ರೆ ನಿನ್ನೆ ಸುರಿದ ಮಳೆ ಕೊಂಚ ನಿರಾಳ ತಂದಿದೆ.
https://twitter.com/KarFireDept/status/897441757381533697
Water logging at adarsha junction pic.twitter.com/Sjxuouo6GD
— HALASOOR TRAFFIC BTP (@halasoortrfps) August 15, 2017
https://twitter.com/Acpnorthtrdvn/status/897364239966289920
Getting the tree removed on Nandidurga Road ..Jaymahal .. pic.twitter.com/U1tHB4l6RL
— Sachin Ghorpade IPS (@DCPTrNorthBCP) August 15, 2017
@AddlCPTraffic @DCPTrWestBCP @blrcitytraffic fallen tree removed ,now vehicles can move freely in 9 th main 36 th cross JP nagar pic.twitter.com/TfNSY5G4gq
— JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ (@JnagarTr) August 15, 2017
@blrcitytraffic @DCPTrEastBCP @AcpSe Tree fallen on Koramangala Club road/6th cross, 5th block, informed @BBMPCOMM1 to cut and remove asap. pic.twitter.com/nJQlSbVJye
— ADUGODI TRAFFIC BTP (@adugoditrfps) August 15, 2017
SDRF team present for search and rescue operation for Koramangala 4th block and surrounding areas. pic.twitter.com/bwNZIBoWU3
— ADUGODI TRAFFIC BTP (@adugoditrfps) August 15, 2017