ಬೆಂಗಳೂರು: ಮಾಜಿ ಸಂಸದೆ, ಎಐಸಿಸಿ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ವಿರುದ್ಧ ಸಿಲಿಕಾನ್ ಸಿಟಿ ಜನ ಗರಂ ಆಗಿದ್ದು, ರಮ್ಯಾ ಹೇಳಿದ ಸುಳ್ಳಿನ ವಿರುದ್ಧ ಬೆಂಗಳೂರು ಜನ ಮುನಿಸಿಕೊಂಡಿದ್ದಾರೆ.
ರಸ್ತೆ ಗುಂಡಿ ಮಧ್ಯೆ ನಿಂತು ರಮ್ಯಾ ಫೋಟೋ ಇಟ್ಕೊಂಡು ಯುವಕರು ಸೆಲ್ಫಿ ತೆಗೋತಿದಾರೆ. ಇದಕ್ಕೆ ಕಾರಣ ಭಾನುವಾರ ರಮ್ಯಾ ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿದ್ದ ಈ ವಿಡಿಯೋವಾಗಿದೆ.
Advertisement
Advertisement
ಪ್ರಧಾನಿ ಮೋದಿ ಬೆಂಗಳೂರನ್ನು ಕ್ರೈಂ ಸಿಟಿ, ಗಾರ್ಬೆಜ್ ಸಿಟಿ, ಅಂತೆಲ್ಲಾ ಕರೆದರು ಅಂತ ಅವರ ಕಾಲೆಳೆಯಲು ರಮ್ಯ ಮೇಡಂ ಫುಲ್ ಜೋಶ್‍ನಲ್ಲಿ ವಿಧಾನಸೌಧ ಸುತ್ತಮುತ್ತ ಇರುವ ರಸ್ತೆ, ಸ್ಟಾರ್ ಹೋಟೆಲ್ ಗಳ ಮುಂದಿರುವ ಒಂದೆರೆಡು ರೋಡ್ ಶಾಟ್ಸ್ ತೆಗೆದು ವಿಡಿಯೋ ಹಾಕಿ ನಮ್ ರೋಡ್ ಸೂಪರ್. ನಿಮ್ಮೂರಿನ ರೋಡ್ ನೋಡಿಕೊಳ್ಳಿ ಅಂತ ಟಾಂಗ್ ಕೊಟ್ಟಿದ್ದರು. ಈ ವಿಡಿಯೋ ಇದೀಗ ಬೆಂಗಳೂರು ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಕ್ರೈಂ ಸಿಟಿ ಅಂದ ಪ್ರಧಾನಿಗೆ ರಮ್ಯಾ ಗುದ್ದು – ವಾರಣಾಸಿ, ಗೋರಖ್‍ಪುರಕ್ಕಿಂತ ಬೆಂಗ್ಳೂರೇ ಉತ್ತಮ ಅಂದ್ರು ಮಾಜಿ ಸಂಸದೆ
Advertisement
ಬೆಂಗಳೂರಿನ ಹದಗೆಟ್ಟ ರಸ್ತೆ, ನಾಲ್ಕು ವರ್ಷದಿಂದಲೂ ಬಿದ್ದಿರುವ ಗುಂಡಿ, ರೋಡಿನ ಮುಂದೆ ರಮ್ಯಾ ಫೋಟೋ ಜೊತೆ ಸಿಲಿಕಾನ್ ಸಿಟಿ ಯುವಕರ ಟೀಮ್ ಸೆಲ್ಫಿ ತೆಗೆದುಕೊಂಡು ಇದನ್ನು ರಮ್ಯಾಗೆ ಫೋಸ್ಟ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ
Advertisement
ದೆಹಲಿಯಲ್ಲಿ ಕುಳಿತು ಪುಗ್ಸಟೆ ಪ್ರಚಾರಕ್ಕೆ ಸುಳ್ಳು ಹೇಳಿದ ರಮ್ಯಾ ಮೊದಲು ಕೆಲಸ ಮಾಡಲಿ, ಆಮೇಲೆ ಕ್ರೆಡಿಟ್ ತಗೊಳಲಿ ಅಂತಾ ಬೆಂಗಳೂರು ಜನ ಸರಿಯಾದ ಪಾಠ ಕಲಿಸಿದ್ದಾರೆ.