ಬೆಂಗಳೂರು: ನಗರದ ರಸ್ತೆಗಳಲ್ಲಿ ಓಡಾಡುವಾಗ ಎಚ್ಚರವಾಗಿರಿ. ಯಾಕಂದ್ರೆ ರಸ್ತೆ ಗುಂಡಿಗಳು ಬಾಯ್ತೆರೆದು ಅಪಘಾತಕ್ಕೆ ಕಾಯುತ್ತಿವೆ.
ಕಳೆದ ಬಾರಿ ಆರು ಜನರನ್ನು ಬಲಿ ಪಡೆದ ರಸ್ತೆಗುಂಡಿಗಳು ಮತ್ತೆ ಬಲಿಗಾಗಿ ಬೆಂಗಳೂರಿನ ರಸ್ತೆಗಳಲ್ಲಿ ಕಾದಿವೆ. ಬೆಂಗಳೂರಿನಲ್ಲಿ ಸಣ್ಣ ಮಳೆಯಾದ್ರೂ ರಸ್ತೆಯಲ್ಲಿ ಗುಂಡಿಗಳ ದರ್ಶನವಂತು ಮಿಸ್ ಇಲ್ದೆ ಆಗುತ್ತೆ. ಅದೇ ರೀತಿ ಸದ್ಯ ಬೆಂಗಳೂರಿನ ಮಾಗಡಿ ರಸ್ತೆ, ಗಾಂಧಿನಗರ, ವಸಂತ ನಗರ, ಸರ್ಜಾಪುರ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಗುಂಡಿಗಳು ಸೃಷ್ಠಿಯಾಗಿದ್ದು, ವಾಹನ ಸವಾರರು ಪ್ರಾಣ ಭಯದಿಂದಲೇ ವಾಹನ ಚಲಾಯಿಸೋ ಸ್ಥಿತಿ ಒದಗಿದೆ.
Advertisement
Advertisement
ಬಿಬಿಎಂಪಿ ಮಾತ್ರ ಇನ್ನೂ ಎಲೆಕ್ಷನ್ ಗುಂಗಿನಲ್ಲೇ ಇದ್ದಂತಿದೆ. ಬಿಬಿಎಂಪಿ ಅಧಿಕಾರಿಗಳ ಲೆಕ್ಕದ ಪ್ರಕಾರ ಇಡೀ ಬೆಂಗಳೂರಿನಲ್ಲಿ ಅಂದಾಜು ಮೂರೂವರೆ ಸಾವಿರ ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 1 ಸಾವಿರ ಮುಚ್ಚಲಾಗಿದೆ ಅಂತ ಬಿಬಿಎಂಪಿ ಆಯುಕ್ತ ಮಹೇಶ್ವರ್ ತಿಳಿಸಿದ್ದಾರೆ.
Advertisement
ಅಭಿವೃದ್ಧಿ ಕಡೆ ಗಮನ ಹರಿಸಿ, ಸಾರ್ವನಿಕರ ತುರ್ತು ಸಮಸ್ಯೆಗಳಿಗೆ ಸ್ಪಂದಿಸ ಬೇಕಿರೋ ರಾಜಕಾರಣಿಗಳು ಮಾತ್ರ, ಅಧಿಕಾರ, ಖಾತೆ ಹಂಚಿಕೆ ಅಂತ ಬಡಿದಾಡಿಕೊಂಡು ಇರೋದು ವಿಪರ್ಯಸವೆ ಸರಿ.