ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಕ್ ಪ್ರಜೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ.
ಸಮೀರಾ ಮಗುವಿಗೆ ಜನ್ಮ ನೀಡಿದ ಪಾಕ್ ಪ್ರಜೆ. ಈಕೆ ಕೇರಳ ಮೂಲದ ಮೊಹಮದ್ ಸಿಹಾಬ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪತಿ ಕೇರಳ ಮೂಲದವನಾಗಿದ್ದರಿಂದ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ನೇಪಾಳ ಮೂಲಕ ಭಾರತಕ್ಕೆ ಬಂದಿದ್ದರು. ಹೀಗೆ ಕತಾರ್ ನಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಪಾಟ್ನಾಗೆ ಬಂದು ಬಳಿಕ ಬೆಂಗಳೂರಲ್ಲಿ ನೆಲೆಸಿದ್ದರು.
Advertisement
ಬಳಿಕ ಇಲ್ಲಿ ಅಕ್ರಮ ವಲಸೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ರು. ಸಮೀರ ಸಂಬಂಧಿಕರಾದ ಕಾಸಿಫ್ ಶಂಶುದ್ದೀನ್ ಮತ್ತು ಪತ್ನಿ ಕಿರಣ್ ಗುಲಾಮ್ ಅಲಿ ಸಹ ಕಳೆದ ಮೇ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ವೇಳೆ ಆರೋಪಿಗಳು ನಕಲಿ ಆಧಾರ್ ಪಡೆದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲದೇ ಬಂಧನದ ವೇಳೆ ಸಮೀರಾ 4 ತಿಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ಇತ್ತೀಚೆಗಷ್ಟೇ ಸಮೀರಾ ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸದ್ಯ ಹೆಣ್ಣು ಮಗು ತಾಯಿ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ.
Advertisement
ಭಾರತೀಯ ಪೌರತ್ವ ಕಾಯ್ದೆ ಅಡಿ 2004ರ ಬಳಿಕ ಜನಿಸುವ ಮಗುವಿನ ತಂದೆ ತಾಯಿ ಭಾರತೀಯ ಪೌರರಾಗಿರಬೇಕು. ಒಬ್ಬರು ಹೊರ ದೇಶಕ್ಕೆ ಸೇರಿದ್ರೂ ಮಗುವಿಗೆ ಭಾರತೀಯ ಪೌರತ್ವ ಸಿಗಲ್ಲ. ಈಗಾಗಲೇ ಸಮೀರಾ ವಿರುದ್ಧ ಪೊಲೀಸರು 9 ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇತ್ಯರ್ಥ ಅಗುವವರೆಗೂ ಸಮೀರಾ ಜೈಲಿನಲ್ಲೇ ಇರಬೇಕು. ಇದರಿಂದ ಸಮೀರಾ ಹಾಗು ಸಿಹಾಬ್ ದಂಪತಿಗಳ ಮಗುವಿಗೆ ರಾಷ್ಟ್ರೀಯತೆ ಸಮಸ್ಯೆ ಎದುರಾಗಿದೆ.
Advertisement
ಈ ಹಿಂದೆ ಕೆಲವರು ವಿದೇಶಿ ಮಹಿಳೆಯರನ್ನು, ಪುರುಷರನ್ನು ಮದುವೆಯಾದ ನಿದರ್ಶನಗಳಿವೆ. ಉದಾಹರಣೆಗೆ ರಾಜೀವ್ ಗಾಂಧಿ, ಇಟಲಿಯ ಸೋನಿಯಾರನ್ನ ಕಾನೂನು ಬದ್ಧವಾಗಿ ವರಿಸಿದ್ರು. ಹೀಗಾಗಿ ಅವರು ಕಾನೂನು ಬದ್ಧವಾಗಿ ಭಾರತೀಯ ಪೌರತ್ವ ಪಡೆದಿದ್ದರು. ಇನ್ನು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಪಾಕಿಸ್ತಾನಿ ಕ್ರಿಕೆಟಿಗ ಶೋಯಬ್ ಮಲಿಕ್ ರನ್ನ ಮದುವೆಯಾಗಿದ್ರೂ ಸಹ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ. ಹೀಗಾಗಿ ಸಮೀರಾ ಭಾರತೀಯ ಪೌರತ್ವ ಹೊಂದಿಲ್ಲದ ಕಾರಣ ಆಕೆಗೆ ಜನಿಸಿದ ಮಗುವಿಗೆ ಪೌರತ್ವ ಸಿಗೋದಿಲ್ಲ ಅನ್ನೋ ವಾದಗಳು ಕೇಳಿ ಬರ್ತಿವೆ.
Advertisement