ಬೆಂಗಳೂರು: ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಇದ್ದು, ಆರೋಗ್ಯ ಇಲಾಖೆಗೆ ಈ ಕೊರೊನಾ ಪ್ರಕರಣಗಳು ದೊಡ್ಡ ತಲೆನೋವಾಗಿದೆ. ಲಾಕ್ ಡೌನ್, ಸೀಲ್ ಡೌನ್ ಮತ್ತು ಡಬಲ್ ಲಾಕ್ ಡೌನ್ ಮಾಡಿದರೂ ಕೊರೊನಾ ಕಂಟ್ರೋಲ್ ಗೆ ಬರುತ್ತಿಲ್ಲ. ಹೀಗಾಗಿ ಆರೋಗ್ಯಾಧಿಕಾರಿಗಳು ಪಾದರಾಯನಪುರದಲ್ಲಿ ಕೊರೊನಾ ರಹಸ್ಯ ಭೇದಿಸಲು ಹರಸಾಹಸ ಪಡುತ್ತಿದ್ದಾರೆ.
ಪಾದರಾಯನಪುರದಲ್ಲಿ ಕೊರೊನಾ ಕಂಟಕವಾಗಲು ಕಾರಣ ತಬ್ಲಿಘಿಗಳು ಅಂತ ಒಂದು ಕಡೆ ಹೇಳಿದರೆ, ಮತ್ತೊಂದು ಕಡೆ ಸಮುದಾಯಕ್ಕೆ ಹಬ್ಬಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಹೀಗಾಗಿ ಪಾದರಾಯನಪುರದಲ್ಲಿ ಕೊರೊನಾದ ರಹಸ್ಯ ಭೇದಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಿಲ್ಲದ ಯೋಜನೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.
Advertisement
Advertisement
ಪಾದರಾಯನಪುರದಲ್ಲಿ ಸೋಂಕಿತರ ನಿವಾಸ ಮತ್ತು ಕ್ವಾರಂಟೈನ್ ಮಾಡಿರುವ ಜಾಗದಲ್ಲಿ ಯಾರೆಲ್ಲ ಓಡಾಡುತ್ತಾರೆ, ಅವರಿಗೆ ರ್‍ಯಾಂಡಮ್ ಟೆಸ್ಟ್ ಮಾಡ್ತಾ ಇದೆ, ಈಗಾಗಲೇ ರ್‍ಯಾಂಡಮ್ ಟೆಸ್ಟ್ ನಲ್ಲಿ ಕೆಲವು ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಪಾದರಾಯನಪುರ ವಾರ್ಡಿನಲ್ಲಿ ಇರುವ ಕ್ಲಿನಿಕ್, ನರ್ಸಿಂಗ್ ಮತ್ತು ಮೆಡಿಕಲ್ ಸ್ಟೋರ್‍ಗಳಿಗೆ ಯಾರೆಲ್ಲಾ ಭೇಟಿ ಕೊಡ್ತಾರೆ ಅವರ ವಿವರ, ಏನು ಔಷಧಿ ತೆಗೆದುಕೊಂಡರು, ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅವರ ಸ್ಥಳ ಮತ್ತು ಅಡ್ರೆಸ್ ಮತ್ತು ಕಾಂಟ್ಯಾಕ್ಟ್ ನಂಬರ್ ಬರೆದಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್ ಗಳಿಗೆ ಸೂಚನೆ ನೀಡಿದ್ದಾರೆ.
Advertisement
Advertisement
ಜೊತೆಗೆ ಸೋಂಕಿನ ಲಕ್ಷಣ ಮುಚ್ಚಿಡಲು ಪ್ಯಾರಾಸೆಟಮಲ್ ಮಾತ್ರೆ ಸೇವಿಸುತ್ತಾ ಇದ್ದಾರೆ ಎಂಬ ಗುಮಾನಿ ಕೇಳಿ ಬರುತ್ತಿದ್ದಂತೆ ವೈದ್ಯರ ಟೀಂ ರೆಡಿಯಾಗಿದ್ದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ರೀತಿ ಪಾದರಾಯನಪುರದಲ್ಲಿ ಕೊರೊನಾ ರಹಸ್ಯ ಭೇದಿಸಲು ಆರೋಗ್ಯಾಧಿಕಾರಿಗಳು ಎಷ್ಟೇ ಹರ ಸಾಹಸ ಪಟ್ಟರೂ ಕಂಟ್ರೋಲ್ ಗೆ ಬರದೇ ಇರೋದು ದೊಡ್ಡ ತಲೆ ನೋವಾಗಿದೆ. ಜೊತೆಗೆ ಸೋಂಕಿತರ ಸಂಬಂಧ ಕ್ವಾರಂಟೈನ್ ಮಾಡಿರುವ ವ್ಯಕ್ತಿಗಳಿಗೆ ಮತ್ತೊಮ್ಮೆ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೇಸ್ ಪತ್ತೆಯಾಗ್ತಿರೋದು ಎಲ್ಲಿ ಎನ್ನುವ ಪ್ರಶ್ನೆ ಆರೋಗ್ಯಾಧಿಕಾರಿಗಳಿಗೆ ಕಾಡ್ತಿದೆ.
ತಬ್ಲಿಘಿ ಲಿಂಕ್ ಹೇಗೆ..?
ಪಾದರಾಯನಪುರದ ಮೊದಲ ಕೊರೊನಾ ಕೇಸ್ ರೋಗಿ ನಂ. 167 & 168 ಆಗಿದೆ. ಮಾರ್ಚ್ 23ರಂದು ಪತ್ತೆಯಾದ ರೋಗಿಗಳಾದ 167, 168 ದೆಹಲಿ ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದರು. ಈ ತಬ್ಲಿಘಿಗಳಿಂದ ಒಂದೇ ರೂಂನಲ್ಲಿದ್ದ ಕೇಸ್ ನಂ.199ಕ್ಕೆ ಸೊಂಕು ತಗುಲಿದೆ. ರೋಗಿ 199 ಪಾದರಾಯನ ಪುರದಲ್ಲಿರುವ ಲೆದರ್ ಫ್ಯಾಕ್ಟರಿ ಮಾಲೀಕನಾಗಿದ್ದು, ಈತನಿಂದ ಅಲ್ಲಿನ ಉದ್ಯೋಗಿಗಳಿಗೆ ಸೋಂಕು ಹರಡಿದೆ. ಇನ್ನು ರೋಗಿ ನಂ. 199 ರಿಂದ ಲೆದರ್ ಫ್ಯಾಕ್ಟರಿ ಉದ್ಯೋಗಿ 292ಗೆ ವೈರಸ್ ಹರಡಿದೆ. ರೋಗಿ ನಂ.292 ರಿಂದ ಆತನ ಫ್ಯಾಮಿಲಿಯ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂದರೆ, 292 ರಿಂದ 559ಕ್ಕೆ, ರೋಗಿ ನಂ 559 ರಿಂದ 560, 561-562-563ಕ್ಕೆ ಸೊಂಕು, ನಂತರ ಲೆದರ್ ಫ್ಯಾಕ್ಟರಿಯ ಉದ್ಯೋಗಿ 281ಗೆ ಸೋಂಕು, ಇವರಿಂದ 564ಕ್ಕೆ ಸೋಂಕು ಹರಡಿದೆ.