– ಬಿಬಿಎಂಪಿ ಎಲೆಕ್ಷನ್ ಇಟ್ಕೊಂಡು ಗಲಭೆ
ಬೆಂಗಳೂರು: ನಗರದ ಪಾದರಾಯನಪುರದಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಕೆಎಫ್‍ಡಿ ಇರ್ಫಾನ್ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕೆಎಫ್‍ಡಿ ಮುಖಂಡ ಇರ್ಫಾನ್ ಪಾಷಾ ತಾನು ಗೆಲ್ಲೋಕೆ ಜನರನ್ನ ಉಪಯೋಗಿಸಿಕೊಂಡಿದ್ದ. ಮುಂದಿನ ವರ್ಷ ಕಾರ್ಪೋರೇಷನ್ ಎಲೆಕ್ಷನ್ ಇದೆ ಚುನಾವಣೆಗೆ ನಿಲ್ಬೇಕು. ಕಳೆದ ಬಾರಿ ಇಮ್ರಾನ್ ಪಾಷಾ ಮುಂದೆ ನಿಂತು ಅವಮಾನ ಅನುಭವಿಸಿದ್ದೀನಿ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಆತನ ತೀರ್ಮಾನ ಮಾಡಿ ಈ ಕೃತ್ಯ ಎಸಗಿದ್ದಾನೆ.
ಇಮ್ರಾನ್ ಪಾಷಾ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿ ಜೈಲಿಗೆ ಹಾಕ್ತಾನೆ. ಇದೆಲ್ಲಾ ಬೇಕಾ ನಿಮಗೆ. ಅವನು ಹೇಳಿದ ಹಾಗೆ ಕೇಳ್ಬೇಡಿ. ನಾನು ನಿಮಗೆ ನ್ಯಾಯ ಕೊಡಿಸ್ತೀನಿ ಅಂತ ಪ್ರಚೋದನೆ ಕೊಟ್ಟಿದ್ದನಂತೆ. ನಾವೇನು ಉದ್ದೇಶ ಇಟ್ಕೊಂಡು ಮಾಡಿಲ್ಲ. ಅವನು ಹೇಳಿದ ಹಾಗೇ ಮಾಡಿದ್ದೀವಿ ಅಂತ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.
ಮಧ್ಯಾಹ್ನ ಕ್ವಾರಂಟೈನ್ ಮಾಡಲು ಬಂದಾಗಲೇ ಇರ್ಫಾನ್ ಗೆ ಅಸಮಾಧಾನ ಇತ್ತು. ಬಳಿಕ ಸಂಜೆ 4 ಗಂಟೆಗೆ ಮತ್ತೆ ಬರ್ತೀವಿ ಅಂತ ವೈದ್ಯರು, ಆಶಾಕಾರ್ಯಕರ್ತೆಯರು ಹೋದ್ರು. ಆ ಸಂದರ್ಭದಲ್ಲಿ ನಮ್ಮ ಜೊತೆ ಮಾತನಾಡಿದ್ದ ಇರ್ಫಾನ್, ಸಂಜೆ ಬಂದಾಗ ಅವರಿಗೆ ತಕ್ಕ ಶಾಸ್ತಿ ಮಾಡ್ಬೇಕು ಅಂತ ಹೇಳಿದ್ದ. ಆದರೆ ಅವರು ಸಂಜೆ ಬರಲಿಲ್ಲ ಬದಲಾಗಿ ರಾತ್ರಿ ಬಂದಿದ್ರು. ನಮ್ಮ ಕೆಲಸವೂ ಸುಲಭ ಆಗಿತ್ತು. ನೋಡ ನೋಡ್ತಿದ್ದಂತೆ ಇರ್ಫಾನ್ ಕಿರುಚಾಡಲು ಶುರು ಮಾಡಿದ್ದ ಎಂದಿದ್ದಾರೆ.
ಅಲ್ಲದೆ ಕ್ವಾರಂಟೈನ್ ಗೆ ಹೋಗಲು ನಿಂತಿದ್ದವರಿಗೆ ನಿಮಗೆ ಬುದ್ಧಿ ಇಲ್ವಾ ಅಂತ ಬೈಯೋಕೂ ಶುರು ಮಾಡಿದ್ದ. ಆ ಸಂದರ್ಭದಲ್ಲಿಯೇ ಗಲಾಟೆ ಆಗಿದ್ದು. ನಮಗೆ ನ್ಯಾಯ ಬೇಕು ಅಂತ ಕೂಗಾಡ್ತಾ ಇದ್ವಿ. ಇದ್ದಕ್ಕಿದ್ದಂತೆ ಗಲಾಟೆ ಪ್ರಾರಂಭ ಆಯ್ತು. ನಾವು ಎಲ್ಲರ ಜೊತೆ ಸೇರ್ಕೊಂಡು ಗಲಾಟೆ ಮಾಡಿದ್ವಿ ಎಂದು ಆರೋಪಿಗಳು ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ.
ಇರ್ಫಾನ್ ಯಾರು..?
ಕೆಎಫ್ ಡಿಯ ಇರ್ಫಾನ್ ಕೇವಲ ಕೆಎಫ್ ಡಿ ಅಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿದೆ.
ಸದ್ಯ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ದಂಡು ನೆರೆದಿದ್ದು, ಇಂದು ಬೆಳಗ್ಗೆ ಖಾಕಿಗಳಿಂದ ಪಥಸಂಚಲನ ನಡೆಯಿತು. ದೊಂಬಿ ಬಳಿಕ ಸೀಲ್‍ಡೌನ್ ಪಾದರಾಯನಪುರದಲ್ಲಿ ಖಾಕಿ ಭದ್ರಕೋಟೆಯಿದ್ದು, ಗಲಭೆ ಎಬ್ಬಿಸಿದ 54 ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದೊಂಬಿ ಸಂಬಂಧ ಮತ್ತೆ 80 ಮಂದಿಯನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.