ಬೆಂಗಳೂರು: ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಂಗಳವಾರ ಮಹತ್ವದ ದಿನ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Elections 2024) ಮೋದಿ (Narendra Modi) ಎಂಬ ದಶಾಶ್ವಮೇಧವನ್ನು ಕಟ್ಟಿಹಾಕಲು ಕಾಂಗ್ರೆಸ್ (Congress) ನೇತೃತ್ವದಲ್ಲಿ ಬಿಜೆಪಿ (BJP) ವಿರೋಧಿ ಶಕ್ತಿಗಳು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ಸಭೆ ನಡೆಸಲಿದೆ.
ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ಮಹಾಮೈತ್ರಿ ಸಭೆ ಎಲ್ಲಾ ಸಿದ್ಧತೆಗಳು ನಡೆದಿವೆ. ಜೂನ್ 23ರಂದು ಬಿಹಾರ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಕೇವಲ 15 ಪಕ್ಷಗಳು ಪಾಲ್ಗೊಂಡಿದ್ದವು. ದಿನಕಳೆದಂತೆ ಬಿಜೆಪಿ ವಿರೋಧಿಕೂಟ ಸೇರಲಿರುವ ಪಕ್ಷಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ
Advertisement
Advertisement
ಈ ಸಭೆಯಲ್ಲಿ ಬರೋಬ್ಬರಿ 26 ಪಕ್ಷಗಳು ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಬಿಜೆಪಿ ವಿರೋಧಿ ಪಾಳಯದ ಘಟಾನುಘಟಿ ನಾಯಕರೆಲ್ಲಾ ಬೆಂಗಳೂರು ಕಡೆಗೆ ಮುಖ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮನ್, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ನ್ಯಾಷನಲ್ ಕಾನ್ಫರೆನ್ಸ್ ಓಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಡಪಕ್ಷಗಳ ನಾಯಕರಾದ ಸೀತಾರಾಮ್ ಯೆಚೂರಿ, ಆರ್‍ಎಲ್‍ಡಿಯ ಜಯಂತ್ ಚೌಧರಿ ಸೇರಿ ಬಹುತೇಕ ಎಲ್ಲಾ ಪಕ್ಷಗಳ ನಾಯಕರು ಬೆಂಗಳೂರಿಗೆ ಬಂದಿದ್ದಾರೆ.
Advertisement
ಸಿದ್ದರಾಮಯ್ಯ ಸರ್ಕಾರದ ಮಂತ್ರಿ ಮಾಗಧರು ಮುಂದೆ ನಿಂತು ಎಲ್ಲರನ್ನು ಸ್ವಾಗತಿಸಿ ಆದರದಿಂದ ಆತಿಥ್ಯ ನೀಡುತ್ತಿದ್ದಾರೆ. ಆದರೆ, ಮಹಾಮೈತ್ರಿ ಸಂಬಂಧ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದ ಎನ್‍ಸಿಪಿ ನಾಯಕ ಶರದ್ ಪವಾರ್ ಮಾತ್ರ ಇನ್ನೂ ಬೆಂಗಳೂರಿಗೆ ಬಂದಿಲ್ಲ. ಎನ್‍ಸಿಪಿ ಮಾಹಿತಿ ಪ್ರಕಾರ ಮಂಗಳವಾರ ಬೆಳಗ್ಗೆ ಪುತ್ರಿ ಸುಪ್ರಿಯಾ ಸುಳೆ ಜೊತೆ ಶರದ್ ಪವಾರ್ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
Advertisement
ಯಾವೆಲ್ಲಾ ಪಕ್ಷಗಳು ಭಾಗಿ?
ಕಾಂಗ್ರೆಸ್, ಡಿಎಂಕೆ, ಜೆಡಿಯು, ಆರ್‌ಜೆಡಿ, ಟಿಎಂಸಿ, ಎಎಪಿ, ಶಿವಸೇನೆ (ಉದ್ಧವ್‍ಠಾಕ್ರೆ), ಎನ್‍ಸಿಪಿ (ಶರದ್‍ಪವಾರ್), ಎನ್‍ಸಿ, ಪಿಡಿಪಿ, ಜೆಎಂಎಂ, ಸಿಪಿಐ, ಸಿಪಿಎಂ, ಆರ್‍ಎಲ್‍ಡಿ, ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಎಂಎಂಕೆ, ಆರ್‌ಎಸ್‌ಪಿ, ಅಪ್ನಾದಳ (ಕೃಷ್ಣಾ ಪಟೇಲ್), ಫಾರ್ವರ್ಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್.
Web Stories