– 40 ಲಕ್ಷ ಹಳೆ ನೋಟು ಜಪ್ತಿ
ಬೆಂಗಳೂರು: ಹಳೆ ನೋಟುಗಳನ್ನ ಬ್ಯಾನ್ ಮಾಡಿ ಸರ್ಕಾರ ಮೂರು ವರ್ಷಗಳೇ ಉರುಳಿಹೋಗಿವೆ. ಹಳೆ ನೋಟುಗಳ ಎಕ್ಸ್ ಚೇಂಜ್‍ಗೆ ಇದ್ದ ಗಡುವು ಮುಗಿದು ವರ್ಷಗಳೇ ಉರುಳಿ ಹೋಗಿವೆ. ಹೀಗಿದ್ದರೂ ಕೂಡ ಸಿಲಿಕಾನ್ ಸಿಟಿಯಲ್ಲಿ ಹಳೆ ನೋಟುಗಳ ಎಕ್ಸ್ ಚೇಂಜ್ ದಂಧೆ ನಿಂತಿಲ್ಲ.
ಕಮಿಷನ್ ಆಧಾರದಲ್ಲಿ ನೋಟು ಪಡೆದು ಹೊಸ ನೋಟುಗಳ ಬದಲಾವಣೆಗೆ ಯತ್ನ ನಿಂತಿಲ್ಲ. ಹೀಗೆ ಹಳೆ ನೋಟುಗಳನ್ನ ವಿನಿಮಯ ಮಾಡುತ್ತಿದ್ದ ಆರೋಪದ ಮೇಲೆ ಜಾಲಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜೇಂದ್ರನ್ ಹಾಗೂ ಮಹಾಂತೇಶ್ ಬಂಧಿತ ಆರೋಪಿಗಳು. ಬಂಧಿತರಿಂದ 500 ಹಾಗೂ 1000 ಮುಖ ಬೆಲೆಯ 40 ಲಕ್ಷ ರೂ. ಹಳೆ ನೋಟುಗಳನ್ನು ಜಪ್ತಿ ಮಾಡಲಾಗಿದೆ.
Advertisement
Advertisement
ಜಾಲಹಳ್ಳಿ ವ್ಯಾಪ್ತಿಯ ಗೋಕುಲ ಬಳಿ ಸಾರ್ವಜನಿಕರೊಂದಿಗೆ ವ್ಯವಹಾರದಲ್ಲಿ ತೊಡಗಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ನೆಡೆಸಿ ಅರೋಪಿಗಳನ್ನ ಬಂಧನ ಮಾಡಲಾಗಿದೆ. ಇದೊಂದು ಬೋಗಸ್ ಅಷ್ಟೆ ಆರ್.ಬಿ.ಐ ಯಾವುದೇ ಕಾರಣಕ್ಕೂ ಹಳೆಯ ನೋಟುಗಳನ್ನು ಎಕ್ಸ್ ಚೇಂಜ್ ಮಾಡುವುದಿಲ್ಲ. 50%, 60% ಕಮಿಷನ್ ಕೊಡಬೇಕು ಎಂಬ ನಿಟ್ಟಿನಲ್ಲಿ ನಿಮ್ಮಿಂದ ಹೊಸ ನೋಟುಗಳನ್ನ ಪಡೆದು ವಂಚಿಸುತ್ತಾರೆ. ಹೀಗಾಗಿ ಯಾರೂ ಕೂಡ ಇಂಥಹ ದಂಧೆಗೆ ಕೈ ಹಾಕಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.