ಬೆಂಗಳೂರು: ಗಾಂಧಿ ಜಯಂತಿಯಂದು ಬೆಂಗಳೂರಿನ 50 ಕಡೆ ಓಡುವ ಜತೆಗೆ ಪ್ಲಾಸ್ಟಿಕ್ ತೆಗೆಯುವ ಕಾರ್ಯಕ್ರಮವನ್ನು ಬಿಬಿಎಪಿ ಆಯೋಜಿಸಿದೆ.
ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ಬಿಬಿಎಂಪಿ ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಗಾಂಧಿ ಜಯಂತಿಯಂದು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೆಳಗ್ಗೆ 7.30 ಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ.
Advertisement
Advertisement
ಪ್ರತಿಯೊಂದು ಜಾಗದಿಂದ ಕನಿಷ್ಟ 200 ರಿಂದ 250 ಮಂದಿ 3 ಕಿಮೀವರೆಗೂ ಓಡಲಿದ್ದಾರೆ. ಈ ವೇಳೆ ಸುತ್ತಮುತ್ತಲು ಕಾಣುವ ಪ್ಲಾಸ್ಟಿಕ್‍ನ್ನ ಸಂಗ್ರಹಿಸಲಿದ್ದಾರೆ. ಓಡುವ ವೇಳೆ ಕೈ ಚೀಲವನ್ನ ಸಹ ನೀಡಲಾಗುತ್ತದೆ. ಈ ಪ್ರಕಾರ ಟನ್‍ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಅನಿಲ್ ಕುಮಾರ್ ತಿಳಿಸಿದರು.
Advertisement
ಮನೆ ಮನೆಗಳಿಂದಲೂ ಪೌರಕಾರ್ಮಿಕರು ಇಂದಿನಿಂದ ಅಕ್ಟೋಬರ್ 2 ರವರೆಗೂ ಪ್ಲಾಸ್ಟಿಕ್ ಕಸ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಈ ಪ್ರಕಾರ ವಾರ್ಡ್ ಪ್ಲಾಸ್ಟಿಕ್ ತಾಜ್ಯ ಮರುಬಳಕೆ ಇಲ್ಲವೇ ಸಿಮೆಂಟ್ ತಯಾರಿಕೆಗೆ ನೀಡಲು ಯೋಚಿಸಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.
Advertisement