ಬೆಂಗಳೂರು: ಹೆಗಡೆ ನಗರ ಸಮೀಪ ಬರುವ ಸಾರಾಯಿಪಾಳ್ಯದ ಸಾದಿಕ್ ನಗರದಲ್ಲಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.
ಕಳೆದ 15 ದಿನಗಳಿಂದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಹೆಲ್ತ್ ಸರ್ವೆ ಮಾಡುತ್ತಿದ್ದು, ಜನರಿಂದ ನೆಗಡಿ, ಜ್ವರ, ಕೆಮ್ಮು ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಂತೆಯೇ ಬುಧವಾರ ಕೂಡ ಮಾಹಿತಿ ಪಡೆಯುತ್ತಿದ್ದಾಗ ಗ್ಯಾಂಗ್ ಒಂದು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದೆ.
ಆಶಾ ಕಾರ್ಯಕರ್ತೆ ಪಡೆದ ರಿಪೋರ್ಟ್ ಹರಿದು ಹಾಕಿದ್ದಾರೆ. ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರೋ ಕರೀರಿ ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ ಇವರಿಗೆ ಯಾರು ಕೂಡ ಮಾಹಿತಿ, ಫೋನ್ ನಂಬರ್ ಕೂಡಬೇಡಿ ಅಂತ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಲಾಗಿದೆ.
ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಬಗ್ಗೆ ಹೇಳಿದ್ರೆ ಆರೋಗ್ಯ ಅಧಿಕಾರಿಗಳು ಕೂಡ ಡೋಂಟ್ ಕೇರ್ ಮಾಡುತ್ತಿದ್ದಾರೆ. ಜನರ ವರ್ತನೆ ನೋಡಿ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಕಣ್ಣೀರು ಹಾಕಿದ್ದಾರೆ.