ಬೆಂಗಳೂರು: ಕಾಮಿ ಸ್ವಾಮಿ ಕುಖ್ಯಾತಿಯ ನಿತ್ಯಾನಂದ ಸ್ವಾಮೀಜಿಯ ಶಿಷ್ಯೆ ರಂಜಿತಾ ಹೋಗ್ತಿದ್ದ ಧ್ಯಾನಪೀಠ ಆಶ್ರಮಕ್ಕೆ ಸೇರಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ನಟಿ, ಶಿಷ್ಯೆ ರಂಜಿತಾ ಬೇರೊಂದು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಇಂದು ಮಧ್ಯಾಹ್ನ ನೆಲಮಂಗಲದ ಜಿಂದಾಲ್ ಬಳಿ ರಂಜಿತಾ ಮತ್ತು ಸಹಚರರಿದ್ದ ಫೋರ್ಡ್ ಕಾರ್, ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನಾರಾಯಣ ಗೌಡ ಮತ್ತು ಹಿಂಬದಿ ಸವಾರ ಲಕ್ಷ್ಮೀಕಾಂತ್ ರಕ್ತದ ಮಡುವಿನಲ್ಲಿ ಬಿದ್ದಿದ್ರೂ ಕಾರ್ ನಿಲ್ಲಿಸದೆ ನಿತ್ಯಾನಂದ ಭಕ್ತರು ಎಸ್ಕೇಪ್ ಆಗಿದ್ದಾರೆ.
ಕಾರು ನಿಲ್ಲಿಸದೇ ಎಸ್ಕೇಪ್ ಆದ ರಂಜಿತಾ ಆ್ಯಂಡ್ ಟೀಂನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ನಗರದ ಎಂಟನೇ ಮೈಲಿನ ಬಳಿ ಕಾರನ್ನು ತಡೆದು ನೋಡಿದಾಗ ಒಳಗಡೆ ರಂಜಿತಾ ಇರೋದು ಗೊತ್ತಾಗಿದೆ. ಎಲ್ಲರಿಗೂ ಕಾರಿನಿಂದ ಕೆಳಗೆ ಇಳಿಯುವಂತೆ ಸಾರ್ವಜನಿಕರು ಹೇಳಿದ್ರೂ, ಯಾರು ಹೊರಗಡ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಕಾರಿನ ಗ್ಲಾಸ್ ಪುಡಿ ಪುಡಿ ಆಗುತ್ತಿದ್ದಂತೆ ರಂಜಿತಾ ಮತ್ತೊಂದು ವಾಹನದಲ್ಲಿ ಪರಾರಿ ಆಗಿದ್ದಾರೆ.
ಈ ಸಂಬಂಧ ನೆಲಮಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಜಿತಾ ಚೆಲಿಸುತ್ತಿದ್ದ ಕಾರಿನ ಚಿತ್ರೀಕರಣಕ್ಕೆ ತೆರಳಿದ್ದ ಮಾದ್ಯಮದವರ ಮೇಲೆ ನಿತ್ಯಾನಂದರ ಶಿಷ್ಯರು ಹರಿಹಾಯ್ದಿದ್ದಾರೆ. ಮಾಧ್ಯಮದವರ ಫೋಟೋ ಕ್ಲಿಕ್ಕಿಸಿ ಬೆದರಿಕೆ ಹಾಕಿರುವ ಘಟನೆಯೂ ನಡೆದಿದೆ.
https://www.youtube.com/watch?v=o6GPPAzSC-Y