ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಮತ್ತೊಬ್ಬ ಭಯೋತ್ಪಾದಕನನ್ನ ಸೋಮವಾರ ಬಂಧಿಸಿದ್ದಾರೆ.
ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎನ್ ಬಿ) ಉಗ್ರ ಸಂಘಟನೆಯ ಸದಸ್ಯ ಮುಷರಫ್ ಹುಸೇನ್ ಅಲಿಯಾಸ್ ಮೂಸಾ ಎಂಬ ಉಗ್ರಗಾಮಿಯನ್ನ ಎನ್‍ಐಎ ಅಧಿಕಾರಿಗಳು ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ.
Advertisement
ಈ ಹಿಂದೆ ಎನ್‍ಐಎ ಸಂಘಟನೆ ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಉಗ್ರಗಾಮಿಗಳಾದ ಜಾಹಿದುಲ್ ಇಸ್ಲಾಮ್, ಹಬೀಬುರ್ ರೆಹಮಾನ್ ಸೇರಿದಂತೆ ಹಲವರನ್ನ ಬಂಧಿಸಿದ್ದರು. ಈ ವೇಳೆ 3 ಗ್ರೆನೈಡ್, 3 ಫೆಬ್ರಕೇಟೆಡ್ ಗ್ರೆನೈಡ್ ಕ್ಯಾಪ್ಸ್, ಐಇಡಿ ಬಾಂಬ್, 9 ಎಮ್ ಎಮ್ ಪಿಸ್ತೂಲ್ ಹಾಗೂ ಒಂದು ಏರ್ ಗನ್ ಹಾಗೂ ಕೆಲ ಭಯೋತ್ಪಾದಕ ವಸ್ತುಗಳು ಪತ್ತೆಯಾಗಿದ್ದವು.
Advertisement
Advertisement
ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಅಧಿಕಾರಿಗಳ ತಂಡ ಇದೀಗ ಮುಷರಫ್ ಹುಸೇನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಷರಫ್ ಹುಸೇನ್ ಕೂಡ ಜೆಎನ್ ಬಿ ಉಗ್ರಸಂಘಟನೆಯ ಭಾಗವಾಗಿದ್ದನು. ಅಲ್ಲದೆ 2018ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದನು. ಬೆಂಗಳೂರಿನಲ್ಲಿ ಸಿಕ್ಕ ಆರೋಪಿಗಳ ಜೊತೆ ಕೈ ಜೋಡಿಸಿದ್ದ ಅನ್ನುವ ಮಾಹಿತಿ ಕೂಡ ಇದೆ.
Advertisement
ದೇಶದಲ್ಲೆಡೆ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದವನನ್ನು ಬಂಧಿಸಿ ಅಧಿಕಾರಿಗಳ ತಂಡ ವಿಚಾರಣೆ ಮುಂದುವರಿಸಿದ್ದಾರೆ.