ಬೆಂಗಳೂರು: ಗೃಹಮಂಡಳಿ (Kranataka Housing Board) ಫ್ಲ್ಯಾಟ್ ಕೊಂಚ ಕಡಿಮೆಗೆ ಸಿಗಬಹುದು ಎಂದು ತಗೊಳ್ಳೋ ಯೋಚನೆ ಮಾಡೋಣ ಅಂತ ನೀವೇನಾದ್ರೂ ಯೋಚನೆ ಮಾಡ್ತಿದ್ದೀರಾ? ಖಂಡಿತಾ ನೀವು ಅಂದುಕೊಂಡಷ್ಟು ಕಡಿಮೆ ದರಕ್ಕೆ ಗೃಹಮಂಡಳಿ ಫ್ಲ್ಯಾಟ್ ದರ ಭಾರೀ (Flat Rate Hike) ದುಬಾರಿಯಾಗಿದೆ.
ಫ್ಲ್ಯಾಟ್ ದರ ನಾಲ್ಕು ವರ್ಷದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಅಂದ ಹಾಗೆ ಈಗ ಬೆಂಗಳೂರು (Bengaluru) ಹೊರವಲಯ ಭಾಗದಲ್ಲಿ ಡಬಲ್ ಬಿಹೆಚ್‌ಕೆ ಫ್ಲ್ಯಾಟ್ ಗೆ 88. ಲಕ್ಷ ರೂ. ಇದೆ. 3 ಬಿಹೆಚ್‌ಕೆ ಫ್ಲ್ಯಾಟ್‌ಗೆ 1.6 ಕೋಟಿ ರೂ. ಇದೆ. ಈ ದರ ನೋಡಿ ಜನ ಕೊಂಚ ಶಾಕ್ ಆಗಿದ್ದಾರೆ. ಖಾಸಗಿ ಬಿಲ್ಡರ್ ಜೊತೆ ಸ್ಪರ್ಧೆ ಮಾಡುವಾಗ ಈ ದರ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಗೃಹ ಮಂಡಳಿ ಬಂದಿದೆ.
Advertisement
Advertisement
ಚಂದಾಪುರ – ಆನೇಕಲ್‌ನ ಸೂರ್ಯನಗರದಲ್ಲಿ ಸೂರ್ಯ ಡಿವೈನ್ ವಸತಿ ಸಮುಚ್ಚಯ ಯೋಜನೆ ಶುರುವಾಗಿದೆ. ಕಾರು ಪಾರ್ಕಿಂಗ್, ವಾಕಿಂಗ್ ಟ್ರ್ಯಾಕಿಂಗ್, ಕ್ಲಬ್ ಹೌಸ್, ಲೈಬ್ರೆರಿ ಸೇರಿದಂತೆ ಐಷಾರಾಮಿ ಪ್ಲ್ಯಾಟ್ ನಿರ್ಮಾಣ ಆಗುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನಿಸಲಾಗಿದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೂಮ್ ಇರೋದ್ರಿಂದ ದರ ಸಹ ಸಿಕ್ಕಾಪಟ್ಟೆ ಹೆಚ್ಚಳ ಆಗಿದೆ.
Advertisement
Advertisement
2021 ರಲ್ಲಿ 2 ಬಿಹೆಚ್‌ಕೆಗೆ -30 ಲಕ್ಷ ರೂ., 3 ಬಿಹೆಚ್‌ಕೆಗೆ 47 ಲಕ್ಷ ರೂ. ರೇಟ್ ಇತ್ತು. ನಾಲ್ಕು ವರ್ಷದಲ್ಲಿ ಮೂರು ಪಟ್ಟು ದರ ಹೆಚ್ಚಳ ಕಂಡಿದೆ.