ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಕುಡಿದು ರಸ್ತೆಯಲ್ಲಿ ತೂರಾಡುವ ಮಂದಿಗೆ ಬೆಂಗಳೂರು ಪೊಲೀಸ್ರು ರಾಜ ಮರ್ಯಾದೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕುಡಿದು ರಸ್ತೆಯಲ್ಲಿ ತೂರಾಡುವ ಎಣ್ಣೆ ಪ್ರಿಯರಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಐಲ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಐಲ್ಯಾಂಡ್ ನಲ್ಲಿ ಸುವ್ಯವಸ್ಥಿತವಾಗಿರುವ ಬೆಡ್ ವ್ಯವಸ್ಥೆ, ಕುಡಿದ ಮತ್ತಿನಲ್ಲಿ ಬಿದ್ದು ಗಾಯಗೊಂಡರೆ ಪ್ರಥಮ ಚಿಕಿತ್ಸೆ ಮಾಡುವ ವ್ಯವಸ್ಥೆ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇದನ್ನು ಓದಿ: ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ
Advertisement
Advertisement
ಅಷ್ಟೇ ಅಲ್ಲದೇ ರಾತ್ರಿ ಐಲ್ಯಾಂಡ್ ನಲ್ಲಿ ಎಣ್ಣೆ ಕಿಕ್ ಇಳಿದ ಮೇಲೆ ಸುರಕ್ಷಿತವಾಗಿ ಕಳಿಸಿಕೊಡಲು ಒಲಾ, ಉಬರ್, ವ್ಯವಸ್ಥೆ ಮಾಡಿದ್ದಾರೆ. ಸಂಬಂಧ ಪಟ್ಟವರ ಹೆಸರು, ವಿಳಾಸ ಪಡೆದು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ಹಾಟ್ ಜೋನ್ ಹಾಗೂ ಪಬ್‍ಗಳು ಇರುವ ಜಾಗದಲ್ಲಿ ಸುಮಾರು ಆರಕ್ಕೂ ಹೆಚ್ಚು ಐಲ್ಯಾಂಡ್‍ಗಳ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ವಿಶೇಷ ಎಂದರೆ ಕುಡಿದು ರಸ್ತೆಯಲ್ಲಿ ತೂರಾಡುವ ಯುವತಿಯರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲು ಪೊಲೀಸ್ರು ಚಿಂತಿಸಿದ್ದಾರೆ.