ಬೆಂಗಳೂರು: ಕೊರೊನಾ ವೈರಸ್ ಹರಡವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿ ಲಾಕ್ ಡೌನ್ ವಿಸ್ತರಿಸುವಂತೆ ಕರೆ ಕೊಟ್ಟಿದ್ದಾರೆ. ಲಾಕ್ ಡೌನ್‍ನಿಂದಾಗಿ ಅನೇಕ ಮಂದಿಯ ಜೀವನ ಅತಂತ್ರವಾಗಿದೆ. ಹೀಗೆ ಬೆಂಗಳೂರಲ್ಲಿ ಮದುವೆ ಮುಗಿಸಿಕೊಂಡು ಬಂದ ನವದಂಪತಿಯನ್ನು ಮಾಲೀಕನೊಬ್ಬ ತಡೆದ ಪ್ರಸಂಗವೊಂದು ನಡೆದಿದೆ.
Advertisement
ಹೌದು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಂಗ, ಪವಿತ್ರ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕೆಲಸವಿಲ್ಲದೆ ಬೇರೆಯವರ ಮನೆಯಲ್ಲಿದ್ದ ರಂಗ ನಿನ್ನೆ ರಾತ್ರಿ 11 ಗಂಟೆಗೆ ತಾನು ಉಳಿದುಕೊಂಡಿದ್ದ ಮನೆಗೆ ವಾಪಸ್ಸಾಗಿದ್ದಾನೆ. ಈ ವೇಳೆ ಮಾಲೀಕ ಗೇಟಿಗೆ ಬೀಗ ಹಾಕಿ ನವದಂಪತಿಯನ್ನು ಹೊಹಾಕಿದ್ದಾನೆ.
Advertisement
Advertisement
ಸುತ್ತಾಡಿ ಬಂದಿದ್ದೀರಿ ಮೆಡಿಕಲ್ ರಿಪೋರ್ಟ್ ತಗೊಂಡು ಬನ್ನಿ ಎಂದು ಮಾಲೀಕ ಗಲಾಟೆ ಮಾಡಿದ್ದಾನೆ. ಅಲ್ಲದೆ ಕೊರೊನಾ ಬಂದಿರುವ ಶಂಕೆ ಇದೆ. ಹೀಗಾಗಿ ಮೆಡಿಕಲ್ ರಿಪೋರ್ಟ್ ತಂದು ಮನೆಗೆ ಬನ್ನಿ ಎಂದು ಗೇಟಿಗೆ ಬೀಗ ಜಡಿದಿದ್ದಾನೆ. ಪರಿಣಾಮ ಬೇರೆ ದಾರಿ ಇಲ್ಲದೆ ದಂಪತಿ ಕಾರಿನಲ್ಲೇ ಮಲಗಿದ್ದಾರೆ.
Advertisement
ಮದ್ವೆಯಾಗಿ 1 ತಿಂಗಳಾಗಿದೆ. ಕ್ಯಾಬ್ ಕೆಲಸವೂ ಇಲ್ಲದೆ ಹಸಿದಿದ್ದ ನವದಂಪತಿ ಬಗಲಗುಂಟೆಯಲ್ಲಿ ಮನೆ ಮಾಡಿ ಊಟಕ್ಕಾಗಿ ಬೇರೆಯವರ ಮನೆಯಲ್ಲಿದ್ದರು. ಕಷ್ಟದಲ್ಲಿದ್ದರೂ ಮನೆ ಮಾಲೀಕನ ದುರ್ವರ್ತನೆಗೆ ನವದಂಪತಿ ನೊಂದಿದ್ದಾರೆ.