ನೆಲಮಂಗಲ: ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‍ಡೌನ್‍ನಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ನೆಲಮಂಗಲ ನಗರದ ಬಸವಣ್ಣ ದೇವರಮಠದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ವಾಮೀಜಿಗಳ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಆಹಾರಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಭಾರತದ ಆರ್ಥಿಕತೆ ಕುಸಿತವಾಗಿದೆ. ಆರ್ಥಿಕತೆಗಿಂತ ಜನರ ಪ್ರಾಣ ಉಳಿಸುವುದು ಮುಖ್ಯವಾಗಿದ್ದು ಮುಂದೆ ಆರ್ಥಿಕತೆ ಚೇತರಿಗೆ ಪಡೆಯಲಿದೆ. ಕೊರೊನಾ ವಾರಿಯರ್ಸ್ ಕಾಯಕದಿಂದ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ ಎಂದರು.
Advertisement
Advertisement
ಇದೇ ವೇಳೆ ನಗರಸಭೆ ವ್ಯಾಪ್ತಿಯ ಕೂಲಿ ಕಾರ್ಮಿಕರು ಹಾಗೂ ತಾಲೂಕಿನ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು, ಸಂಸದೆ ಶೋಭಾ ಕರಂದ್ಲಾಜೆ ಹೂವಿನ ಹಾರವಾಕುವ ಮೂಲಕ ಪುಷ್ಪವೃಷ್ಟಿ ಮಾಡಿ ಕಾರ್ಮಿಕ ದಿನಾಚರಣೆ ಶುಭಾಶಯ ಕೋರುವ ಮೂಲಕ ಕೃತಜ್ಞತೆ ಸಲ್ಲಿಸಿದರು.
Advertisement
Advertisement
ಬಸವಣ್ಣ ದೇವರ ಮಠದವತಿಯಿಂದ ಪೌರಕಾರ್ಮಿಕರಿಗೆ ಅಹಾರಕಿಟ್ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಬಸವಲಿಂಗಸ್ವಾಮೀಜಿ, ಎನ್‍ಡಿಎ ಅಧ್ಯಕ್ಷ ಮಲ್ಲಯ್ಯ, ನಗರಸಭೆ ಆರೋಗ್ಯ ನಿರೀಕ್ಷಕ ಬಸವರಾಜು, ಸದಸ್ಯ ಪೂರ್ಣಿಮಾ, ರಾಜಮ್ಮ ಮುಖಂಡರಾದ ಶಾಂತಕುಮಾರ್, ಹಂಚಿಪುರ ಮಂಜುನಾಥ್ ಮತ್ತಿತರರಿದ್ದರು.