ಉಡುಪಿ: ಬೆಂಗಳೂರಿನಲ್ಲಿ ಹತ್ತಕ್ಕೂ ಹಚ್ಚು ಪ್ರದೇಶಗಳಲ್ಲಿ ನೀರಾ ಬಾರ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಈ ಮಾಹಿತಿಯೇ ಗೊತ್ತಿಲ್ವಂತೆ.
ರಾಜಧಾನಿಯ ನೀರಾ ಬಾರ್ ಬಗ್ಗೆ ಶನಿವಾರ ಉಡುಪಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರು ಅಚ್ಚರಿಗೊಂಡರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.
ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದ್ದಾರೆ. ಆದರೆ ಇಲಾಖೆಯ ಈ ಬಗ್ಗೆ ಬೆಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾಧ್ಯಮಗಳಿಗೆ ಬೆಂಗಳೂರಿನಲ್ಲೇ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ಸಚಿವರಿಗೆ ಮಾಹಿತಿಯೇ ನೀಡದೆ ಅಧಿಕಾರಿಗಳು ಪರವಾನಿಗೆ ಕೊಟ್ರಾ? ರೈತರನ್ನು ಮುಂದಿಟ್ಟು ರಾಜಧಾನಿಯ ನಾಗರೀಕರಿಗೆ ನನೀರಾ ಕುಡಿಸಲು ಹೊರಟ್ರಾ ಎಂಬೂದು ಸದ್ಯ ಇರುವ ಪ್ರಶ್ನೆ.