ಬೆಂಗಳೂರು: ದಕ್ಷಿಣ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕವೇ ಫೇವರೇಟ್ ಆಗಿದೆ. 25 ಸ್ಥಾನ ಕೊಟ್ಟ ಕರ್ನಾಟಕಕ್ಕೆ ಮೋದಿ ಬಂಪರ್ ಗಿಫ್ಟ್ ಕೊಡಲು ತಯಾರಿ ನಡೆಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಹೌದು. ಕರ್ನಾಟಕಕ್ಕೆ ಒಂದಲ್ಲ, ಎರಡಲ್ಲ, ಈ ಬಾರಿ 4 ರಿಂದ 5 ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಜಾತಿ ಸಮೀಕರಣದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಲಿದ್ದು ಹಾಲಿ ಸಚಿವರಿಗೆ ಕೊಕ್, ಹೊಸಬರಿಗೆ ಅವಕಾಶ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಲಿಂಗಾಯತ, ಒಕ್ಕಲಿಗ, ದಲಿತ ಬ್ರಾಹ್ಮಣ, ಹಿಂದುಳಿದ ಕಾಂಬಿನೇಶನ್‍ನಲ್ಲಿ ಮೋದಿ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
* ಲಿಂಗಾಯತ ಕೋಟಾ- ಸುರೇಶ್ ಅಂಗಡಿ, ಜಿ.ಎಸ್.ಬಸವರಾಜು
* ಒಕ್ಕಲಿಗ ಕೋಟಾ- ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ
* ದಲಿತ ಕೋಟಾ- ಉಮೇಶ್ ಜಾಧವ್, ಶ್ರೀನಿವಾಸ್ ಪ್ರಸಾದ್
* ಹಿಂದುಳಿದ ವರ್ಗ ಕೋಟಾ- ನಳಿನ್ ಕುಮಾರ್ ಕಟೀಲ್, ಪಿ.ಸಿ.ಮೋಹನ್
* ಬ್ರಾಹ್ಮಣ ಕೋಟಾ- ಪ್ರಹ್ಲಾದ್ ಜೋಷಿ
Advertisement
ಈ ಕಾಂಬಿನೇಶನ್ ನಲ್ಲಿ ಸಚಿವ ಸ್ಥಾನ ಹಂಚಿಕೆ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಚರ್ಚೆ ಜೋರಾಗಿದೆ. ಹಾಗಾದರೆ ಮೋದಿ ಕರ್ನಾಟಕಕ್ಕೆ 5 ಸಚಿವ ಸ್ಥಾನ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕು.